ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಹತ್ಯೆ ನಡೆದಿದ್ದು, ಪತಿಯೇ ತನ್ನ ಪತ್ನಿಯನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.
ಬೆಂಗಳೂರಿನ ಬಾಣಸವಾಡಿಯ ಜಯಲಕ್ಷ್ಮಿ ಶಾಲೆಯ ಸಮೀಪ ಘಟನೆ ನಡೆದಿದ್ದು, ಪತ್ನಿ ಕಲೈವಾಣಿ ಕೊಂದ ರಮೇಶ್ ಪೊಲೀಸರಿಗೆ ಶರಣಾಗಿದ್ದಾನೆ. ರಮೇಶ್ ಗೆ ಕಲೈವಾಣಿ ಎರಡನೇ ಪತ್ನಿಯಾಗಿದ್ದು, ಮೊದಲ ಪತ್ನಿಯಿಂದ ಬೇರೆಯಾಗಿ ಕಲೈವಾಣಿ ಜೊತೆಗೆ ರಮೇಶ್ ವಾಸವಾಗಿದ್ದ ಎನ್ನಲಾಗಿದೆ.
ರಮೇಶ್ ನಿನ್ನೆ ಮೊದಲ ಪತ್ನಿ ಮತ್ತು ಮಕ್ಕಳನ್ನು ಭೇಟಿಯಾಗಿದ್ದ. ಈ ವಿಚಾರಕ್ಕೆ ಎರಡನೇ ಪತ್ನಿ ಕಲೈವಾಣಿ ಮತ್ತು ರಮೇಶನ ನಡುವೆ ಜಗಳವಾಗಿತ್ತು. ಗಲಾಟೆ ವಿಕೋಪಕ್ಕೆ ತಿರುಗಿ ಕಲೈವಾಣಿಯನ್ನು ರಮೇಶ್ ಹತ್ಯೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಘಟನೆ ಸಂಬಂಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.