ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ, ಕೋಲ್ಕತ್ತಾದಿಂದ ಬೆಂಗಳೂರಿಗೆ ಚಾಲಕರಹಿತ ಮೆಟ್ರೋ ಆಗಮಿಸಿದೆ.
ನಗರದ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಹಳದಿ ಮಾರ್ಗದಲ್ಲಿ ಸಂಚರಿಸಲಿರುವಂತ 8ನೇ ರೈಲು ಇಂದು ಬೆಂಗಳೂರಿಗೆ ತಲುಪಿದ್ದು, ಮುಂದಿನ ದಿನಗಳಲ್ಲಿ ಹಳದಿ ಮಾರ್ಗದಲ್ಲಿ 8ನೇ ರೈಲು ಸಂಚಾರ ಆರಂಭಗೊಳ್ಳಲಿದೆ.
ಬೆಂಗಳೂರಲ್ಲಿ ಆಗಸ್ಟ್.10ರಂದು ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರವನ್ನು ಉದ್ಘಾಟಿಸಲಾಗಿತ್ತು. ಇದೀಗ ಮತ್ತೊಂದು ಗುಡ್ ನ್ಯೂಸ್ ಎನ್ನುವಂತೆ ಇಂದು ಡ್ರೈವರ್ ಲೆಸ್ ರೈಲು ಬೆಂಗಳೂರಿಗೆ ತಲುಪಿದೆ. ಹೀಗಾಗಿ ಈ ಮಾರ್ಗದಲ್ಲಿ ಮೆಟ್ರೋ ರೈಲುಗಳ ಸಂಚಾರ ಹೆಚ್ಚಾಗಲಿದ್ದು, ಇದರಿಂದ ರೈಲುಗಳ ಓಡಾಟದ ಸಮಯ ಕೂಡ ಕಡಿಮೆಯಾಗಲಿದೆ.
ಸದ್ಯ ಬೆಂಗಳೂರಿನ ಯೆಲ್ಲೋ ಮಾರ್ಗದಲ್ಲಿ 10 ನಿಮಿಷಗಳಿಗೆ ಒಂದರಂತೆ ಮೆಟ್ರೋ ರೈಲುಗಳು ಸಂಚರಿಸುತ್ತಿವೆ. ನಾಳೆ 8ನೇ ರೈಲು ಬೆಂಗಳೂರಿಗೆ ತಲುಪಿ, ಸಂಚಾರ ಆರಂಭದ ಬಳಿಕ ಸಮಯದಲ್ಲಿ ಕಡಿಮೆಯಾಗೋ ಸಾಧ್ಯತೆ ಇದೆ.








