ಹಾಸನ : ರಾಜ್ಯದಲ್ಲಿ ಡೆಂಗ್ಯೂ ಜ್ವರಕ್ಕೆ ಮತ್ತೊಂದು ಬಲಿಯಾಗಿದ್ದು, ಚಿಕಿತ್ಸೆ ಫಲಿಸದೇ ಹಾಸನ ಜಿಲ್ಲೆಯ ಅರಕಲಗೂಡು ಮೂಲದ 13 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೊಮ್ಮನಾಯಕನಹಳ್ಳಿಯ ಅಪ್ಪಣ್ಣ ಶೆಟ್ಟಿ-ಪದ್ಮಾ ದಂಪತಿಯ ಪುತ್ರಿ ಅಕ್ಷತಾ ಡೆಂಗ್ಯೂ ಜ್ವರಕ್ಕೆ ಮೃತಪಟ್ಟ ಬಾಲಕಿಯಾಗಿದ್ದು, ಅಕ್ಷತಾ ಏಳನೇ ತರಗತಿ ಓದುತ್ತಿದ್ದಳು, ಕೆಲ ದಿನಗಳ ಹಿಂದೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲಿ ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಇನ್ನು ಜನವರಿ 1ರಿಂದ ಜು.1ರವರೆಗೆ 6187 ಪ್ರಕರಣ ವರದಿಯಾಗಿವೆ. ಹಾಸನದಲ್ಲಿ 2, ಧಾರವಾಡ, ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ತಲಾ 1 ಸೇರಿದಂತೆ ಒಟ್ಟು 5 ಮೃತ ಪ್ರಕರಣಗಳು ದಾಖಲಾಗಿವೆ. ಮೃತಪಟ್ಟ ಕೆಲ ವ್ಯಕ್ತಿಗಳಲ್ಲಿ ಡೆಂಗೆ ದೃಢವಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದುವರೆಗೆ 491 ಮಂದಿಯಲ್ಲಿ ಡೆಂಗೆ ದೃಢವಾಗಿದ್ದು, ಉಳಿದಂತೆ ಮೈಸೂರು 479, ಹಾವೇರಿ 451, ಶಿವಮೊಗ್ಗದಲ್ಲಿ 283 ಪ್ರಕರಣಗಳು ವರದಿಯಾಗಿವೆ.