ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಎಟಿಎಂ ವಾಹನ ದರೋಡೆಯಾಗಿದ್ದು, `HITACHI’ ಕಂಪನಿ ಸಿಬ್ಬಂದಿಯಿಂದ ಬರೋಬ್ಬರಿ 1.37 ಕೋಟಿ ರೂ. ಲೂಟಿ ಮಾಡಲಾಗಿದೆ.
ಹೌದು, ಬೆಂಗಳೂರಿನಲ್ಲಿ ಎಸ್ ಬಿಐ, ಎಕ್ಸಿಸ್ ಬ್ಯಾಂಕ್ ಎಟಿಎಂಗೆ ಹಣ ತುಂಬುವ ಕಂಪನಿ ಹಿಟಾಚಿ ಸಿಬ್ಬಂದಿಯಿಂದ ಎಟಿಎಂ ವಾಹನ ದರೋಡ ಮಾಡಲಾಗಿದೆ. ಎರಡು ತಂಡಗಳಿಂದ 1.37 ಕೋಟಿ ರೂ. ಹಣ ಲೂಟಿ ಮಾಡಲಾಗಿದೆ.
ಒಂದು ತಂಡ 57 ಲಕ್ಷ ರೂ. ದೋಚಿದ್ರೆ, ಮತ್ತೊಂದು ತಂಡ 80 ಲಕ್ಷ ರೂ. ದರೋಡೆ ಮಾಡಿದೆ. ಜನವರಿ 19 ರಂದು ಎಟಿಎಂ ವಾಹನ ದರೋಡೆ ಮಾಡಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರವೀಣ್, ಧನಶೇಖರ್, ರಾಮಕ್ಕ, ಹರೀಶ್ ಕುಮಾರ್ ಎಟಿಎಂ ವಾಹನ ದರೋಡೆ ಮಾಡಿ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.








