ನವದೆಹಲಿ: ಬಿಹಾರದ ಬೇಗುಸರಾಯ್ನಿಂದ ಟೇಕ್ ಆಫ್ ಆಗುವ ಮೊದಲು ಅಮಿತ್ ಶಾ ಅವರ ಹೆಲಿಕಾಪ್ಟರ್ ಸ್ವಲ್ಪ ಸಮಯದವರೆಗೆ ನಿಯಂತ್ರಣ ಕಳೆದುಕೊಂಡಿದ್ದರಿಂದ ಅವರು ಸೋಮವಾರ ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ಅವರ ಹೆಲಿಕಾಪ್ಟರ್ ಟೇಕ್ ಆಫ್ ಆಗುವ ವೇಳೆ ಹೆಲಿಕಾಪ್ಟರ್ ಕೆಲವು ಕ್ಷಣಗಳ ಕಾಲ ನಿಯಂತ್ರಣ ಕಳೆದುಕೊಂಡಿತು. ಈ ಘಟನೆ ಸೋಮವಾರ ಬಿಹಾರದಲ್ಲಿ ನಡೆದಿದೆ. ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಲು ರಾಜ್ಯದ ಬೇಗುಸರಾಯ್ಗೆ ತೆರಳಿದ್ದ ಅಮಿತ್ ಶಾ ಮನೆಗೆ ಮರಳುತ್ತಿದ್ದರು. ವೈರಲ್ ಆಗಿರುವ ವೀಡಿಯೊದ ಪ್ರಕಾರ. ಟೇಕ್ ಆಫ್ ಆಗುವಾಗ, ಹೆಲಿಕಾಪ್ಟರ್ ಸ್ವಲ್ಪ ಬಲಕ್ಕೆ ಬಾಗಿತು. ಅದು ನೆಲವನ್ನು ಸ್ಪರ್ಶಿಸುತ್ತಿರುವಂತೆ ಭಾಸವಾಯಿತು. ಆದಾಗ್ಯೂ, ಪೈಲಟ್ ನಿಯಂತ್ರಣವನ್ನು ಮರಳಿ ಪಡೆದಾಗ, ಹೆಲಿಕಾಪ್ಟರ್ ಟೇಕ್ ಆಫ್ ಆಗಬೇಕಿದ್ದ ದಿಕ್ಕಿನಲ್ಲಿ ಹೊರಟಿತು. ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಅಮಿತ್ ಶಾ ಅವರ ನಕಲಿ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸಮಯದಲ್ಲಿ ಈ ಘಟನೆ ನಡೆದಿದೆ.
Begusarai, Bihar: Home Minister Amit Shah's Narrow Escape as Chopper Briefly Loses Control🚨🚨🚨#IWA 👁️👁️
क्या ये साजिश है👁️👁️ pic.twitter.com/5DQvowyYvN— Badal Saraswat (मोदी का परिवार) (@badal_saraswat) April 29, 2024