ಬೆಂಗಳೂರು : ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 15 ನೇ ಆವೃತ್ತಿಯ ಏರ್ ಶೋಗೆ ಚಾಲನೆ ನೀಡಿದ್ದು, ಇಂದಿನಿಂದ 5 ದಿನ ಲೋಹದ ಹಕ್ಕಿಗಳ ಹಾರಾಟ ನಡೆಯಲಿದೆ.
ಇಂದು ಏರ್ ಶೋಗೆ ಚಾಲನೆ ನೀಡಿದ ಬೆನ್ನಲ್ಲೇ ಭಾರತೀಯ ವಾಯುಪಡೆಯ ಎಲ್‌ಸಿಎ ತೇಜಸ್ ಮಾರ್ಕ್ 1ಎ ಆಕಾಶದಲ್ಲಿ ಕುಶಲತೆಯನ್ನು ಪ್ರದರ್ಶನಕ್ಕೆ ವೀಕ್ಷಕರು ಫಿದಾ ಆಗಿದ್ದಾರೆ.
#WATCH | Aero India 2025 | Bengaluru: Indian Air Force LCA Tejas Mark 1A performs manoeuvres in the sky as spectators look on.
Source: ANI/ Aero India pic.twitter.com/1eEQChLsvZ
— ANI (@ANI) February 10, 2025
ಏರೋ ಇಂಡಿಯಾದಲ್ಲಿ ಒಟ್ಟು 90 ದೇಶಗಳು, 30 ದೇಶಗಳ ರಕ್ಷಣಾ ಸಚಿವರು, 43 ರಾಷ್ಟ್ರಗಳ ಸೇನಾ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ. ಏರ್ ಶೋದಲ್ಲಿ 70 ಕ್ಕೂ ಹೆಚ್ಚು ಯುದ್ದ ವಿಮಾನ, ಸರಕು ,ತರಬೇತಿ ವಿಮಾನಗಳು ಪ್ರದರ್ಶನ ನೀಡಲಿವೆ. ಏರ್ ಶೋ ನೋಡಲು 5 ದಿನಗಳಲ್ಲಿ 7 ಲಕ್ಷ ಜರು ಆಗಮಿಸುವ ನಿರೀಕ್ಷೆ ಇದೆ. ಏರ್ ಶೋ 2025 ಫೆಬ್ರವರಿ 10ರಿಂದ ಫೆಬ್ರವರಿ 14ರ ವರೆಗೆ ಪ್ರತಿದಿನವೂ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ನಡೆಯಲಿದೆ. ಫೆಬ್ರವರಿ 13 ಹಾಗೂ 14ರಂದು ಸಾರ್ವಜನಿಕರಿಗೆ ಅವಕಾಶ ಇರಲಿದೆ.