ಅಹಮದಾಬಾದ್ : ಜೂನ್ 12 ರಂದು ಗುಜರಾತ್’ನ ಅಹಮದಾಬಾದ್’ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ 210 ಜನರನ್ನ ಡಿಎನ್ಎ ಪರೀಕ್ಷೆಗಳ ಮೂಲಕ ಗುರುತಿಸಲಾಗಿದೆ. ಇಲ್ಲಿಯವರೆಗೆ 187 ಶವಗಳನ್ನ ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.
ಉಳಿತ ಮೃತರ ಶವಗಳನ್ನ ಗುರುತಿಸಿ ಹಸ್ತಾಂತರಿಸುವ ಪ್ರಕ್ರಿಯೆ ವಿವಿಧ ಹಂತಗಳಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಐದು ಜನರ ಡಿಎನ್ಎ ಪರೀಕ್ಷೆಗಳು ಇನ್ನೂ ನಡೆಯುತ್ತಿವೆ ಎಂದು ಅವರು ಹೇಳಿದರು. 15 ಶವಗಳನ್ನು ಗುರುತಿಸಲು ಕುಟುಂಬ ಸದಸ್ಯರಿಂದ ಹೆಚ್ಚುವರಿ ಮಾದರಿಗಳನ್ನು ಸಂಗ್ರಹಿಸಬೇಕಾಗಿದೆ ಎಂದು ಅವರು ಹೇಳಿದರು. ಇನ್ನೂ 10 ಜನರ ಶವಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಏತನ್ಮಧ್ಯೆ, ಏರ್ ಇಂಡಿಯಾ ಅಪಘಾತದಲ್ಲಿ ಸಾವನ್ನಪ್ಪಿದವರಲ್ಲಿ ಇಬ್ಬರು ವಿದೇಶಿಯರ ಶವಗಳನ್ನ ಅವರ ದೇಶಗಳಿಗೆ ಕಳುಹಿಸಲಾಗಿದೆ. 11 ಶವಗಳನ್ನ ಗುಜರಾತ್’ನ ಹೊರಗಿನ ಇತರ ರಾಜ್ಯಗಳಿಗೆ ಕಳುಹಿಸಲಾಗಿದೆ. ಡಿಎನ್ಎ ಪರೀಕ್ಷೆಗಳ ಮೂಲಕ ಗುರುತಿಸಲಾದ 202 ಶವಗಳಲ್ಲಿ ಹೆಚ್ಚಿನವುಗಳನ್ನು ಆಂಬ್ಯುಲೆನ್ಸ್’ಗಳಲ್ಲಿ ಗುಜರಾತ್ನ ವಿವಿಧ ಭಾಗಗಳಿಗೆ ರಸ್ತೆ ಮೂಲಕ ಕಳುಹಿಸಲಾಗಿದೆ. ವಿಮಾನದಲ್ಲಿ ಮೃತಪಟ್ಟವರಲ್ಲಿ 123 ಭಾರತೀಯರು, 27 ಬ್ರಿಟಿಷ್ ಪ್ರಜೆಗಳು, ನಾಲ್ವರು ಪೋರ್ಚುಗೀಸ್ ಪ್ರಜೆಗಳು ಮತ್ತು ಒಬ್ಬರು ಕೆನಡಾದವರು. ನಾಲ್ವರು ಪ್ರಯಾಣಿಕರಲ್ಲದವರು ಅಪಘಾತದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.