ನವದೆಹಲಿ : 2025ರ ಏಷ್ಯಾ ಕಪ್’ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸೂಪರ್ ಫೋರ್ ಪಂದ್ಯದ ಸಂದರ್ಭದಲ್ಲಿ ಪಾಕಿಸ್ತಾನಿ ಬೌಲರ್’ಗಳಾದ ಹ್ಯಾರಿಸ್ ರೌಫ್ ಮತ್ತು ಸಾಹಿಬ್‌ಜಾದಾ ಫರ್ಹಾನ್ ವಿರುದ್ಧ ಐಸಿಸಿ ಕ್ರಮ ಕೈಗೊಂಡಿದೆ. ಹ್ಯಾರಿಸ್ ರೌಫ್ ಭಾರತದ ಆರಂಭಿಕ ಆಟಗಾರರಾದ ಅಭಿಷೇಕ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಅವರನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಮತ್ತು ಆಕ್ರಮಣಕಾರಿ ಸನ್ನೆಗಳನ್ನು ಸಹ ಮಾಡಿದ್ದ.
ಪಾಕಿಸ್ತಾನದ ಆರಂಭಿಕ ಆಟಗಾರ ಸಾಹಿಬ್‌ಜಾದಾ ಫರ್ಹಾನ್ ಅರ್ಧಶತಕ ಗಳಿಸಿದ ನಂತರ ಬಂದೂಕಿನ ಸಂಭ್ರಮಾಚರಣೆ ಮಾಡಿದರು. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಈಗ ಹ್ಯಾರಿಸ್ ರೌಫ್ ಮತ್ತು ಸಾಹಿಬ್‌ಜಾದಾ ಫರ್ಹಾನ್ ವಿರುದ್ಧ ಕ್ರಮ ಕೈಗೊಂಡಿದೆ. ಮೂಲಗಳ ಪ್ರಕಾರ, ಐಸಿಸಿ ಹ್ಯಾರಿಸ್ ರೌಫ್ ಅವರ ಪಂದ್ಯ ಶುಲ್ಕದ 30 ಪ್ರತಿಶತದಷ್ಟು ದಂಡ ವಿಧಿಸಿದೆ, ಆದರೆ ಸಾಹಿಬ್‌ಜಾದಾ ಫರ್ಹಾನ್’ಗೆ ಛೀಮಾರಿ ಹಾಕಿದ್ದು ಎಚ್ಚರಿಕೆ ನೀಡಿ ಕಳುಹಿಸಿದೆ.
ಪಂದ್ಯಾವಳಿಯ ಮೂಲಗಳ ಪ್ರಕಾರ, ಐಸಿಸಿ ಮ್ಯಾಚ್ ರೆಫರಿ ರಿಚಿ ರಿಚರ್ಡ್‌ಸನ್ ಶುಕ್ರವಾರ (ಸೆಪ್ಟೆಂಬರ್ 26) ಮಧ್ಯಾಹ್ನ ಪಾಕಿಸ್ತಾನಿ ತಂಡದ ಹೋಟೆಲ್’ನಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸಿದರು. ಇಬ್ಬರೂ ಆಟಗಾರರು (ಹ್ಯಾರಿಸ್ ರೌಫ್ ಮತ್ತು ಸಾಹಿಬ್‌ಜಾದಾ ಫರ್ಹಾನ್) ಖುದ್ದಾಗಿ ವಿಚಾರಣೆಗೆ ಹಾಜರಾಗಿದ್ದರು ಮತ್ತು ಲಿಖಿತ ಪ್ರತಿಕ್ರಿಯೆಗಳನ್ನ ಸಹ ಸಲ್ಲಿಸಿದರು. ಈ ಸಮಯದಲ್ಲಿ ಪಾಕಿಸ್ತಾನ ತಂಡದ ವ್ಯವಸ್ಥಾಪಕ ನವೀದ್ ಅಕ್ರಮ್ ಚೀಮಾ ಕೂಡ ಹಾಜರಿದ್ದರು.
BREAKING : ಕಾನ್ಸ್ಟೇಬಲ್, ‘SI’ ಹುದ್ದೆಗಳ ವಯೋಮಿತಿ, 2 ವರ್ಷಗಳ ಕಾಲ ಸಡಿಲಿಕೆಗೆ ರಾಜ್ಯ ಸರ್ಕಾರ ಚಿಂತನೆ
BREAKING : ಅಕ್ಟೋಬರ್’ನಲ್ಲಿ ಬ್ರಿಟಿಷ್ ಪ್ರಧಾನಿ ‘ಸ್ಟಾರ್ಮರ್’ ಭಾರತಕ್ಕೆ ಮೊದಲ ಭೇಟಿ |British PM Starmer