ಆಗ್ನೇಯ ಅಫ್ಘಾನಿಸ್ತಾನದಲ್ಲಿ ಗುರುವಾರ 6.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸ್ (ಜಿಎಫ್ಜೆಡ್) ತಿಳಿಸಿದೆ. ಭೂಕಂಪನವು 10 ಕಿ.ಮೀ (6.21 ಮೈಲಿ) ಆಳದಲ್ಲಿತ್ತು ಎಂದು ಜಿಎಫ್ಜೆಡ್ ತಿಳಿಸಿದೆ.
ಕುನಾರ್ ಮತ್ತು ನಂಗರ್ಹಾರ್ ಪ್ರಾಂತ್ಯಗಳಲ್ಲಿ 6 ತೀವ್ರತೆಯ ಮತ್ತೊಂದು ಭೂಕಂಪವು 10 ಕಿ.ಮೀ (6 ಮೈಲಿ) ಆಳದಲ್ಲಿ ಅಪ್ಪಳಿಸಿದಾಗ ವ್ಯಾಪಕ ಹಾನಿ ಮತ್ತು ವಿನಾಶವನ್ನು ಉಂಟುಮಾಡಿದ ನಾಲ್ಕು ದಿನಗಳ ನಂತರ ಇದು ಸಂಭವಿಸಿದೆ.
ಭಾನುವಾರ ತಡರಾತ್ರಿ (ಸ್ಥಳೀಯ ಕಾಲಮಾನ ರಾತ್ರಿ 11:40) ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಹಿಂದಿನ ಭೂಕಂಪದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಈವರೆಗೆ ಕನಿಷ್ಠ 2,200 ಜನರು ಸಾವನ್ನಪ್ಪಿದ್ದಾರೆ