ನವದೆಹಲಿ: ಭಾರತೀಯ ವಾಯುಪಡೆ (IAF) ಮಾರ್ಚ್ 8ರಂದು ಏರ್ ಫೋರ್ಸ್ ಕಾಮನ್ ಅಡ್ಮಿಷನ್ ಟೆಸ್ಟ್ ಅಥವಾ AFCAT 1 ಫಲಿತಾಂಶವನ್ನ ಬಿಡುಗಡೆ ಮಾಡಿದೆ. ಫಲಿತಾಂಶಗಳು ಈಗ ವಾಯುಪಡೆ afcat.cdac.in/AFCAT ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಿದೆ. “AFCAT 01/2024 ಫಲಿತಾಂಶವನ್ನು ಘೋಷಿಸಲಾಗಿದೆ ಮತ್ತು ವೈಯಕ್ತಿಕ ಲಾಗಿನ್ ಮೂಲಕ ವೀಕ್ಷಿಸಲು ಲಭ್ಯವಿದೆ” ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
AFCAT 01/2024 ನೇಮಕಾತಿ ಡ್ರೈವ್ ಮೂಲಕ, ಭಾರತೀಯ ವಾಯುಪಡೆಯ ಫ್ಲೈಯಿಂಗ್, ಗ್ರೌಂಡ್ ಡ್ಯೂಟಿ (ಟೆಕ್ನಿಕಲ್) ಮತ್ತು ಗ್ರೌಂಡ್ ಡ್ಯೂಟಿ (ತಾಂತ್ರಿಕೇತರ) ಶಾಖೆಗಳಲ್ಲಿ ಖಾಲಿ ಇರುವ 317 ಹುದ್ದೆಗಳನ್ನು ಭರ್ತಿ ಮಾಡುವ ಗುರಿಯನ್ನು ಐಎಎಫ್ ಹೊಂದಿದೆ.
ಫಲಿತಾಂಶ ಪರಿಶೀಲಿಸುವುದು ಹೇಗೆ.?
ಹಂತ 1: ಐಎಎಫ್’ನ ಅಧಿಕೃತ ವೆಬ್ಸೈಟ್ afcat.cdac.inಗೆ ಹೋಗಿ.
ಹಂತ 2: ಮುಖಪುಟದಲ್ಲಿ, ಫಲಿತಾಂಶ ಲಿಂಕ್ ಹುಡುಕಿ.
ಹಂತ 3: ಹೊಸ ವಿಂಡೋ ತೆರೆಯುತ್ತಿದ್ದಂತೆ, ಲಾಗಿನ್ ವಿವರಗಳನ್ನು ನಮೂದಿಸಿ ಮತ್ತು ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
ಹಂತ 4: IAF AFCAT 01/2024 ಫಲಿತಾಂಶವು ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ.
ಹಂತ 5: ಎಲ್ಲಾ ವಿವರಗಳನ್ನು ಕ್ರಾಸ್ ಚೆಕ್ ಮಾಡಿ.
ಹಂತ 6: ಡೌನ್ಲೋಡ್ ಮಾಡಿ ಮತ್ತು ಮುಂದಿನ ಬಳಕೆಗಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಬೆಂಗಳೂರು ‘ಬಾಂಬ್ ಸ್ಫೋಟ’ ಪ್ರಕರಣ: ‘ಶಂಕಿತ ಬಾಂಬರ್’ ಬಗ್ಗೆ ‘NIA’ಗೆ ಮಹತ್ವದ ಸುಳಿವು