ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ಜೋರಾಗಿತ್ತು. ಒಂದು ಕಡೆ ದರ್ಶನ್ ಅಭಿಮಾನಿಗಳು ಮತ್ತೊಂದು ಕಡೆ ನಟ ಕಿಚ್ಚ ಸುದೀಪ್ ಅಭಿಮಾನಿಗಳ ನಡುವೆ ಸ್ಟಾರ್ ವಾರ್ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿತ್ತು.
ಕೆಲವು ಕಿಡಿಗೇಡಿಗಳು ಇನ್ನೊಂದು ಹೆಜ್ಜೆ ಮುಂದೆ ಹೋಗಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲವಾಗಿ ಮೆಸೇಜ್ ಮಾಡಿರುವ ಘಟನೆ ನಡೆದಿತ್ತು. ಈ ಒಂದು ಘಟನೆಗೆ ಸಂಬಂಧಿಸಿದಂತೆ ಸ್ಕ್ರೀನ್ ಶಾಟ್ ಗಳ ಸಮೇತ ಬೆಂಗಳೂರು ಕಮಿಷನರ್ ಅವರನ್ನು ಭೇಟಿಯಾಗಿ ವಿಜಯಲಕ್ಷ್ಮಿ ದೂರು ಸಲ್ಲಿಸಿದ್ದರು. ಬಳಿಕ ಸಿಸಿಬಿ ಕ್ರೈಮ್ ಠಾಣೆಗೂ ಕೂಡ ಅವರು ದೂರು ನೀಡಿದ್ದರು. ಇದೀಗ ಸಿಸಿಬಿ ಕ್ರೈಂ ಠಾಣೆ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಏನಿದು ಘಟನೆ?
ವಿಜಯಲಕ್ಷ್ಮಿಗೆ ಕೆಟ್ಟ ಕಾಮೆಂಟ್ ಮತ್ತು ಕೆಟ್ಟ ಸಂದೇಶವನ್ನು ಕಳುಹಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಅವುಗಳನ್ನು ಪಟ್ಟಿ ಮಾಡಿ ದೂರು ನೀಡಿದ್ದರು ಎನ್ನಲಾಗಿದೆ.
ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ನಡುವೆ ವಾರ್: ಹುಬ್ಬಳ್ಳಿಯಲ್ಲಿ ಸುದೀಪ್ ನೀಡಿದ್ದ ಹೇಳಿಕೆಯೊಂದು ಬಾರಿ ಬಿರುಗಾಳಿಯನ್ನು ಎಬ್ಬಿಸಿತ್ತು, ಬಳಿಕ ವಿಜಯಲಕ್ಷ್ಮಿಕೂಡ ಹೆಸರನ್ನು ಉಲ್ಲೇಖಸದೇ ಸುದೀಪ್ ಅವರಿಗೆ ಅವಾಜ್ ಹಾಕಿದ್ದಾರೆ ಆಂತ ಸುದೀಪ್ ಅಭಿಮಾನಿಗಳು ಗುಟುರು ಹಾಕುತ್ತ ಇದ್ದರು. ದರ್ಶನ್ ಮತ್ತು ವಿಜಯಲಕ್ಷ್ಮಿಸಾಂಸಾರಿಕ ಜೀವನ ಕೆಟ್ಟಾಗಿ ನೆರವಿಗೆ ಬಂದದ್ದು ಸುದೀಪ್ ಅಂತ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.
ಈ ನಡುವೆ ವಿಜಯಲಕ್ಷ್ಮಿ ಹೇಳಿದ್ದ ಹೇಳಿಕೆಗೆ ಅವರು ನನಗೆ ಹೇಳಿದ್ದರೆ, ನಾನು ನಲಪಾಡ್ ಮತ್ತು ರಾಜುಗೌಡ ಆ ಬಗ್ಗೆ ಹೇಳುತ್ತೇನೆ ಅಂತ ಹೇಳಿದ್ದರು.








