ಬಳ್ಳಾರಿ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಪಾಲಾಗಿರುವ ನಟ ದರ್ಶನ್ ಗೆ ಸೊಳ್ಳೆ ಕಾಟ ಶುರುವಾಗಿದ್ದು, ರಾತ್ರಿಯಿಡಿ ನಿದ್ದೆ ಇಲ್ಲದೇ ಪರದಾಟ ನಡೆಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ದರ್ಶನ್ ಗೆ ರಾಜಾತಿಥ್ಯ ನೀಡಿದ ಹಿನ್ನೆಲೆಯಲ್ಲಿ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದ್ದು, ಬಳ್ಳಾರಿ ಜೈಲಿನಲ್ಲಿ ಸೊಳ್ಳೆ ಕಾಟದಿಂದ ರಾತ್ರಿ ನಿದ್ದೆ ಇಲ್ಲದೇ ಪರದಾಟ ನಡೆಸಿದ್ದಾರೆ. ನಟ ದರ್ಶನ್ ಅವರು 6 ಬೈ 12 ಜೈಲಿನ ಕೊಠಡಿಯಲ್ಲಿ ಮಲಗುತ್ತಿದ್ದು, ಮೌನಕ್ಕೆ ಶರಣಾಗಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ವಿಚಾರ ಸಂಬಂಧ ನಟ ದರ್ಶನ್ ಸೇರಿದಂತೆ ರೇಣುಕಾಸ್ವಾಮಿ ಹತ್ಯೆ ಆರೋಪಿಗಳನ್ನು ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರಿಸಲಾಗಿದ್ದು, ನಟ ದರ್ಶನ್ ರನ್ನು ಬಳ್ಳಾರಿಯ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲಾಗಿದೆ. ನಿದ್ರೆ ಬಾರದೆ ನಟ ದರ್ಶನ್ ಎರಡನೇ ರಾತ್ರಿ ಕಳೆದಿದ್ದಾರೆ. ಬೆಳಗ್ಗೆ ಜೈಲಿನ ಮೆನುವಿನಿಂದ ಉಪಹಾರ ಸೇವಿಸಿದ್ದಾರೆ.