ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳುಸುದ್ದಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಪ್ರಚೋದನಕಾರಿ ವಿಷಯಗಳನ್ನು ಪೋಸ್ಟ್ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಧರ್ಮಸ್ಥಳ ಪ್ರಕರಣದ ಬಗ್ಗೆ ಇಲ್ಲಸಲ್ಲದ ಪೋಸ್ಟ್ ಗಳನ್ನು ಹಾಕಿದವರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದರು.
ಇಂದು ಎಸ್ಐಟಿ ಮುಖ್ಯಸ್ಥರು ಬೆಂಗಳೂರಿನ ಸದಾಶಿವನ ನಗರದಲ್ಲಿರುವ ಗ್ರೂಜ ಸಚಿವ ಜಿ ಪರಮೇಶ್ವರ್ ಅವರನ್ನು ಭೇಟಿ ಆದರೂ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದು ಬಿಟ್ಟು ಬೇರೆ ಯಾವುದೇ ಚರ್ಚೆ ನಡೆದಿಲ್ಲ ಎಸ್ ಐ ಟಿ ಅಧಿಕಾರಿಗಳು ಧರ್ಮಸ್ಥಳ ಪ್ರಕರಣದ ತನಿಖೆ ಮಾಡುತ್ತಿದ್ದಾರೆ. ವರದಿ ಕೊಡುವವರೆಗೂ ಆ ಬಗ್ಗೆ ಮಾತನಾಡಲು ಹೋಗಲ್ಲ ತನಿಖೆಯ ವೇಳೆ ನಾವ್ಯಾರು ಪ್ರಕರಣದ ಕುರಿತು ಮಾತನಾಡಲ್ಲ.
ಪ್ರಣವ್ ಮೋಹಂತಿ ಹೊರಗಡೆ ಹೋಗುವ ಪ್ರಶ್ನೆ ಎಲ್ಲಿ ಬಂದಿದೆ? ಅವರು ಕರೆದಾಗ ನಾವು ಕಳುಹಿಸುತ್ತೇವೆ ಎಂಬುದೇನು ಇಲ್ಲ ಇಂತಹ ಜಾಗಕ್ಕೆ ನೇಮಕ ಮಾಡುತ್ತಿದ್ದೇವೆ ಎಂದು ಕೇಂದ್ರ ಹೇಳಬೇಕು ಮೋಹಂತಿ ಸೆಲೆಕ್ಟ್ ಆಗಿದ್ದಾರೆ ಅಷ್ಟೇ ನಾವು ಅವರನ್ನು ಕಳುಹಿಸುತ್ತೀವೋ ಬಿಡುತ್ತೇವೆ ಅದು ನಮಗೆ ಬಿಟ್ಟ ವಿಚಾರ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಹೇಳಿಕೆ ನೀಡಿದರು.