ಬೆಂಗಳೂರು : ಬೆಂಗಳೂರಿನಲ್ಲಿ ಗಾಳಿಯಲ್ಲಿ ಪಿಸ್ತೂಲ್ ನಿಂದ 6 ಸುತ್ತು ಗುಂಡು ಹಾರಿಸಿರುವ ಘಟನೆ ನಡೆದಿದ್ದು, ಫೈರಿಂಗ್ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬನ್ನೇರುಘಟ್ಟ ಬಳಿಯ ಸ್ಕ್ರಾಪ್ ಗೋಡೌನ್ ನಲ್ಲಿ ಸೆಪ್ಟೆಂಬರ್ 22 ರಂದು ನಡೆದ ಮೊಯಿನ್ ಖಾನ್ ಬರ್ತ್ ಡೇ ಪಾರ್ಟಿ ಆಚರಣೆಯಲ್ಲಿ ಸೈಯದ್ ಅಲ್ತಾಫ್ ಎಂಬಾತ ಪಿಸ್ತೂಲ್ ನಿಂದ ಗಾಳಿಯಲ್ಲಿ 6 ಸುತ್ತು ಗುಂಡು ಹಾರಿಸಿದ್ದಾನೆ.
ಜಬೇರ್ ಖಾನ್ ಲಿಮ್ರಾ ಎಂಬುವರ ಇನ್ ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದ್ದು, ಆರೋಪಿ ಸೈಯದ್ ಅಲ್ತಾಫ್ ನನ್ನು ಪೊಲೀಸರು ಬಂಧಿಸಿದ್ದಾರೆ.