ನವದೆಹಲಿ: ಸರ್ಕಾರದ ಮಹತ್ವಾಕಾಂಕ್ಷೆಯ ‘ಒಂದು ದೇಶ ಒಂದು ಚುನಾವಣಾ ಮಸೂದೆ’ ಮಂಡನೆಯ ಸಂದರ್ಭದಲ್ಲಿ ಇಂದು ಲೋಕಸಭೆಯಲ್ಲಿ ಗೈರಾದ ಸಂಸದರಿಗೆ ಬಿಜೆಪಿ ನೋಟಿಸ್ ಕಳುಹಿಸಲಿದೆ ಎಂದು ಮೂಲಗಳು ತಿಳಿಸಿವೆ. ಇಂದು ನಡೆದ ಮತದಾನದಲ್ಲಿ 20ಕ್ಕೂ ಹೆಚ್ಚು ಬಿಜೆಪಿ ಸಂಸದರು ಗೈರು ಹಾಜರಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಪಕ್ಷವು ಈ ಹಿಂದೆ ತನ್ನ ಲೋಕಸಭಾ ಸದಸ್ಯರಿಗೆ ಮೂರು ಸಾಲಿನ ವಿಪ್ ಕಳುಹಿಸಿದ್ದು, ಸದನದಲ್ಲಿ ಹಾಜರಾಗುವಂತೆ ನಿರ್ದೇಶಿಸಿದೆ.
ಅಂದ್ಹಾಗೆ, ಸಂಸದರ ಅನುಪಸ್ಥಿತಿಯು ಸಂವಿಧಾನವನ್ನ ತಿದ್ದುಪಡಿ ಮಾಡುವ ಮತ್ತು ಸಂಸದೀಯ ಮತ್ತು ರಾಜ್ಯ ಚುನಾವಣೆಗಳನ್ನ ಏಕಕಾಲದಲ್ಲಿ ಅನುಮತಿಸುವ ಎರಡು ಮಸೂದೆಗಳಿಗೆ ಅಡ್ಡಿಯಾಗಲಿಲ್ಲ. ಆದ್ರೆ, ಇದು ಕಾಂಗ್ರೆಸ್’ಗೆ ಅಸ್ತ್ರ ನೀಡಿದಂತಾಗಿದ್ದು. ಈ ವಿಷಯದ ಬಗ್ಗೆ ಸರ್ಕಾರಕ್ಕೆ ಸಾಕಷ್ಟು ಬೆಂಬಲವಿಲ್ಲ ಎಂಬುದಕ್ಕೆ ಇದು ಪುರಾವೆಯಾಗಿದೆ ಎಂದು ಅದು ವಾಗ್ದಾಳಿ ನಡೆಸಿದೆ.
ಡಿ.21ರಂದು ರಾಜಸ್ಥಾನದಲ್ಲಿ 55ನೇ ‘GST ಕೌನ್ಸಿಲ್ ಸಭೆ’ ನಿಗದಿ : ಏನೆಲ್ಲಾ ನಿರೀಕ್ಷಿಸ್ಬೋದು ಗೊತ್ತಾ.?
ಡಿ.21, 22, 23ರಂದು ಬಾಗಲಕೋಟೆಯ ತೋಟಗಾರಿಕಾ ವಿವಿಯಲ್ಲಿ ‘ತೋಟಗಾರಿಕಾ ಮೇಳ’ ಆಯೋಜನೆ
Good News ; ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ; ಮುಂದಿನ ವರ್ಷದಿಂದ ‘NCERT ಪಠ್ಯಪುಸ್ತಕ’ಗಳ ಬೆಲೆ ಇಳಿಕೆ