ಬೆಂಗಳೂರು : ಬೆಂಗಳೂರಿನಲ್ಲಿ ಸಂಚಾರಿ ಪೊಲೀಸರಿಗೆ ಆವಾಜ್ ಹಾಕಿ ಪೊಲೀಸರಿಗೆ ಕಾಲಿನಿಂದ ಮಹಿಳೆಯೊಬ್ಬರು ಒದ್ದು ರಂಪಾಟ ಮಾಡಿರುವ ಘಟನೆ ನಡೆದಿದೆ.
ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಂಚಾರಿ ಪೊಲೀಸರಿಗೆ ಮಹಿಳೆ ಆವಾಜ್ ಹಾಕಿ ಕಿರಿಕ್ ಮಾಡಿದ್ದಾಳೆ. ಬೇರೊಬ್ಬ ವಾಹನ ಸವಾರನ ಜೊತೆಗೆ ಕಿರಿಕ್ ತೆಗೆದಿದ್ದ ಸೋನು ಎಂಬ ಮಹಿಳೆಯನ್ನು ವಿಚಾರಿಸಿದ ವೇಳೆ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾಳೆ
ಬೆಂಗಳೂರಿನ ಸಂಚಾರಿ ಪೊಲೀಸರ ಹಲ್ಲೆಗೆ ಯತ್ನಿಸಿದ ಮಹಿಳೆ, ಟ್ರಾಫಿಕ್ ಪೊಲೀಸ್ ಕಾಲಿಗೆ ಒದ್ದು, ಕಾಲರ್ ಹಿಡಿಯಲು ಮುಂದಾಗಿದ್ದಾಳೆ. ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.