ಕಲಬುರಗಿ : ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗೆ ಮೂರನೇ ವ್ಯಕ್ತ ಪ್ರವೇಶ ಪಡೆದಿದ್ದಾರೆ ಎಂದು ಮಾಜಿ ಸಚಿವ ಶ್ರೀರಾಮಲು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಿಎಂ ಹುದ್ದೆಗೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಫೈಟ್ ನಡೆಯುತ್ತಿದೆ. ತಮ್ಮ ಪುತ್ರನನ್ನು ಸಿಎಂ ಮಾಡೋಕೆ ಮಲ್ಲಿಕಾರ್ಜುನ್ ಖರ್ಗೆ ಅವರು ಸರ್ಕಾರವನ್ನು ಬೀಳಿಸಲಿದ್ದಾರೆ ಎಂದು ಹೇಳಿದ್ದಾರೆ.
ಮಲ್ಲಿಕಾರ್ಜುನ್ ಖರ್ಗೆ ಅವರು ತಮ್ಮ ಪುತ್ರನನ್ನು ಸಿಎಂ ಮಾಡಲು ಈ ಸರ್ಕಾರವನ್ನು ಬೀಳಿಸುತ್ತಾರೆ. ಅದಕ್ಕಾಗಿ ಮೊನ್ನೆ ಸರ್ಕಾರ ಬೀಳುವ ಬಗ್ಗೆ ಮಾತನಾಡಿದ್ದಾರೆ.ಮೋದಿ ಅವರು ಈ ಸರ್ಕಾರವನ್ನು ಬೀಳಿಸುತ್ತಾರೆ ಅಂತ ಹೇಳಿದ್ದಾರೆ. ಇಬ್ಬರ ಕಾದಾಟದಲ್ಲಿ ಮಗನನ್ನು ಸಿಎಂ ಮಾಡೋಕೆ ಹೊರಟಿದ್ದಾರೆ ಎಂದರು.