ಕೋಲಾರ : ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಗ್ರಾಮದ ಸುತ್ತಮುತ್ತ ಭಯಾನಕ ಶಬ್ದ ಕೇಳಿ ಬಂದ ಅನುಭವವಾಗಿದ್ದು, ಜನರು ಭಯದಿಂದ ಮನೆಯಿಂದ ಹೊರೆಗೆ ಓಡಿ ಬಂದ ಘಟನೆ ನಡೆದಿದೆ.
ಟೇಕಲ್ ಗ್ರಾಮದ ಸುತ್ತಮುತತ ಭಯಾನಕ ಶಬ್ದ ಕೇಳಿಬಂದಿದ್ದು, ಈ ವೇಳೆ ಆಕಾಶದಲ್ಲಿ ಜೆಟ್ ವಿಮಾನ ಕಂಡು ಬಂದಿದೆ. ಜೆಟ್ ವಿಮಾನದ ಶಬ್ದವಾ ಅಥವಾ ಯಾವುದಾದರೂ ಸ್ಪೋಟ ಸಂಭವಿಸಿದೆಯಾ ಎಂಬ ಆತಂಕ ಶುರುವಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.