ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಹತ್ಯೆ ನಡೆದಿದ್ದು, ನೆಲಮಂಗಲದ ಮನೆಯೊಂದರಲ್ಲಿ ವ್ಯಕ್ತಿಯ ಗುರುತು ಸಿಗದಂತೆ ಪಾತಕಿಗಳು ವ್ಯಕ್ತಿಯನ್ನು ಕೊಲೆ ಮಾಡಿದ್ದಾರೆ.
ನೆಲಮಂಗಲದ ವಿಜಯಲಕ್ಷ್ಮೀ ಬಡಾವಣೆಯ ಮನೆಯೊಂದರಲ್ಲಿ ಕೊಳೆತ ವ್ಯಕ್ತಿಯ ಶವ ಪತ್ತೆಯಾಗಿದೆ. ನಾಗರಾಜ್ ಎಂಬುವರ ಮನೆಯಲ್ಲಿ 4 ದಿನದ ಹಿಂದೆ ಕೊಲೆ ಮಾಡಲಾಗಿದೆ. ಮನೆಗೆ ಬೀಗ ಹಾಕಿದ್ದರಿಂದ ಸುತ್ತಮುತ್ತ ಕೆಟ್ಟ ವಾಸನೆ ಬರುತ್ತಿತ್ತು. ಮನೆ ಮಾಲೀಕ ನಾಗರಾಜ್ ಗೆ ಸ್ಥಳೀಯರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಬಂದಿದ್ದು, ಈ ವೇಳೆ ಗುರುತು ಸಿಗದ ಬೆತ್ತಲೆ ಕೊಳೆತ ಮೃತದೇಹ ಕಂಡು ಶಾಕ್ ಆಗಿದ್ದಾರೆ.
2 ತಿಂಗಳ ಹಿಂದೆ ನಾಗರಾಜ್ ಮೋಹನ್ ಕೃಷ್ಣ-ಊರ್ವಶಿ ಎಂಬುವರಿಗೆ ಮನೆ ಬಾಡಿಗೆ ನೀಡಿದ್ದರು. ಕೊಲೆಯಾಗಿದ್ದು ಮೋಹನ್ ಕೃಷ್ಣನಾ ಎಂಬುದು ಡೌಟ್ ಇದೆ. ಮೋಹನ್ ಜೊತೆಗಿದ್ದ ಊರ್ವಶಿ ಈವರೆಗೂ ಪತ್ತೆ ಆಗಿಲ್ಲ. ಕೊಲೆ ಮಾಡಿದ ಬಳಿಕ ಪಾಪಿಗಳು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಅಕ್ರಮ ಸಂಬಂಧಿದಾಗಿ ಹತ್ಯೆಯಾಗಿದೆ ಎಂದು ಶಂಕಿಸಲಾಗಿದ್ದು, ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.








