ನವದೆಹಲಿ : 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರನ್ನ ಘೋಷಿಸಲಾಗಿದ್ದು, 2022 ರಿಂದ ಚಿತ್ರರಂಗದಲ್ಲಿ ಅತ್ಯುತ್ತಮವಾದುದನ್ನ ಆಚರಿಸಲಾಗುತ್ತಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನವದೆಹಲಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿಜೇತರನ್ನು ಬಹಿರಂಗಪಡಿಸಿತು. ಕನ್ನಡಿಗ, ನಟ ರಿಶಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.
ಇನ್ನು ಕನ್ನಡದ ಕಾಂತಾರ ಸಿನಿಮಾಗೆ ಎರಡು ಪ್ರಶಸ್ತಿ ಲಭಿಸಿದ್ದು, ಒಂದು ಕಾಂತಾರ ಸಿನಿಮಾ ನಟನೆಗಾಗಿ ನಟ ರಿಶಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಇನ್ನೊಂದು ಅತ್ಯುತ್ತಮ ಮನರಂಜನಾ ಸಿನಿಮಾ ಪ್ರಶಸ್ತಿ ಕೂಡ ಕಾಂತಾರ ಸಿನಿಮಾ ಪಾಲಾಗಿದೆ. ಇನ್ನು ಕನ್ನಡದ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಕೂಡ ಕನ್ನಡಿಗರ ಪಾಲಾಗಿದ್ದು, ಕೆಜೆಎಫ್‍ಪ್ರಶಸ್ತಿ ಲಭಿಸಿದೆ.
70th National Film Awards | Best actor in a leading role – Risabh Shetty for Kantara.
Best actress in a leading role – Nithya Menen for 'Thiruchitrambalam' and Manasi Parekh for 'Kutch Express'
'Gulmohar' starring Sharmila Tagore and Manoj Bajpayee wins Best Hindi Film award. pic.twitter.com/ds3WbEHwfY
— ANI (@ANI) August 16, 2024
2022 ರ ಜನವರಿ 1 ರಿಂದ ಡಿಸೆಂಬರ್ 31 ರವರೆಗೆ ಸೆನ್ಸಾರ್ ಮಂಡಳಿಯಿಂದ ಪ್ರಮಾಣೀಕರಿಸಿದ ಚಲನಚಿತ್ರಗಳನ್ನು 70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಗುರುತಿಸುತ್ತವೆ. ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರು ಸೇರಿದಂತೆ ವಿಜೇತರನ್ನು 2024 ರ ಅಕ್ಟೋಬರ್ ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅಧ್ಯಕ್ಷ ದ್ರೌಪದಿ ಮುರ್ಮು ಗೌರವಿಸಲಿದ್ದಾರೆ.
ಕಳೆದ ವರ್ಷದ 69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ, ಅಲ್ಲು ಅರ್ಜುನ್, ಆಲಿಯಾ ಭಟ್, ಕೃತಿ ಸನೋನ್ ಮತ್ತು ಪಂಕಜ್ ತ್ರಿಪಾಠಿ ಅಗ್ರ ವಿಜೇತರಲ್ಲಿ ಸೇರಿದ್ದರು. ರಾಕೆಟ್ರಿ: ದಿ ನಂಬಿ ಎಫೆಕ್ಟ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದರೆ, ಎಸ್.ಎಸ್.ರಾಜಮೌಳಿ ಅವರ ಆರ್ಆರ್ಆರ್ ಆರು ಪ್ರಶಸ್ತಿಗಳನ್ನ ಗೆದ್ದಿತ್ತು.
ಭಾರತದಲ್ಲಿರುವ ‘ಮುಸ್ಲಿಂ’ರು ಕೂಡ ‘ಹಿಂದೂ’ಗಳೇ : ಹರಿಹರ ಪೀಠದ ವಚನಾನಂದಶ್ರೀ ಅಚ್ಚರಿಯ ಹೇಳಿಕೆ!
ಭಾರತದಲ್ಲಿರುವ ‘ಮುಸ್ಲಿಂ’ರು ಕೂಡ ‘ಹಿಂದೂ’ಗಳೇ : ಹರಿಹರ ಪೀಠದ ವಚನಾನಂದಶ್ರೀ ಅಚ್ಚರಿಯ ಹೇಳಿಕೆ!