ನವದೆಹಲಿ : 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರನ್ನ ಘೋಷಿಸಲಾಗಿದ್ದು, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನವದೆಹಲಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿಜೇತರನ್ನ ಘೋಷಿಸಿತು. ರಾಷ್ಟ್ರ ಪ್ರಶಸ್ತಿಯಲ್ಲಿ ಕನ್ನಡ ಸಿನಿಮಾಗಳು ಅಕ್ಷರಶಃ ಕಮಾಲ್ ಮಾಡಿವೆ.
ಕನ್ನಡದ ಕಾಂತಾರ ಸಿನಿಮಾಗೆ ಎರಡು ಪ್ರಶಸ್ತಿ ಲಭಿಸಿದ್ದು, ಒಂದು ಕಾಂತಾರ ಸಿನಿಮಾ ನಟನೆಗಾಗಿ ನಟ ರಿಶಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಇನ್ನೊಂದು ಅತ್ಯುತ್ತಮ ಮನರಂಜನಾ ಸಿನಿಮಾ ಪ್ರಶಸ್ತಿ ಕೂಡ ಕಾಂತಾರ ಸಿನಿಮಾ ಪಾಲಾಗಿದೆ. ಇನ್ನು ಕನ್ನಡದ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಕೂಡ ಕನ್ನಡಿಗರ ಪಾಲಾಗಿದ್ದು, ಕೆಜೆಎಫ್‍ಪ್ರಶಸ್ತಿ ಲಭಿಸಿದೆ.
2022 ರ ಜನವರಿ 1 ರಿಂದ ಡಿಸೆಂಬರ್ 31 ರವರೆಗೆ ಸೆನ್ಸಾರ್ ಮಂಡಳಿಯಿಂದ ಪ್ರಮಾಣೀಕರಿಸಿದ ಚಲನಚಿತ್ರಗಳನ್ನು 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಗುರುತಿಸುತ್ತವೆ. ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರು ಸೇರಿದಂತೆ ವಿಜೇತರನ್ನು 2024ರ ಅಕ್ಟೋಬರ್’ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅಧ್ಯಕ್ಷ ದ್ರೌಪದಿ ಮುರ್ಮು ಗೌರವಿಸಲಿದ್ದಾರೆ.
70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಫುಲ್ ಲಿಸ್ಟ್ ಇಲ್ಲಿದೆ.!
ಅತ್ಯುತ್ತಮ ಚಲನಚಿತ್ರ : ಆಟಂ
ಅತ್ಯುತ್ತಮ ನಟ : ರಿಷಬ್ ಶೆಟ್ಟಿ
ಅತ್ಯುತ್ತಮ ನಟಿ : ನಿತ್ಯಾ ಮೆನನ್ ಮತ್ತು ಮಾನಸಿ ಪರೇಖ್
ಅತ್ಯುತ್ತಮ ನಿರ್ದೇಶಕ : ಸೂರಜ್ ಬರ್ಜಾತ್ಯ
ಅತ್ಯುತ್ತಮ ಪೋಷಕ ನಟಿ : ನೀನಾ ಗುಪ್ತಾ
ಅತ್ಯುತ್ತಮ ಪೋಷಕ ನಟ : ಪವನ್ ಮಲ್ಹೋತ್ರಾ
ಆರೋಗ್ಯಕರ ಮನರಂಜನೆಯನ್ನ ಒದಗಿಸುವ ಅತ್ಯುತ್ತಮ ಚಲನಚಿತ್ರ ಕಾಂತಾರ
ಅತ್ಯುತ್ತಮ ಚೊಚ್ಚಲ ಫೌಜಾ, ಪ್ರಮೋದ್ ಕುಮಾರ್
ಅತ್ಯುತ್ತಮ ತೆಲುಗು ಚಿತ್ರ : ಕಾರ್ತಿಕೇಯ 2
ಅತ್ಯುತ್ತಮ ತಮಿಳು ಚಿತ್ರ : ಪೊನ್ನಿಯಿನ್ ಸೆಲ್ವನ್: ಭಾಗ 1
ಅತ್ಯುತ್ತಮ ಪಂಜಾಬಿ ಚಿತ್ರ : ಬಾಘಿ ದಿ ಧೀ
ಅತ್ಯುತ್ತಮ ಒಡಿಯಾ ಚಿತ್ರ : ದಮನ್
ಅತ್ಯುತ್ತಮ ಮಲಯಾಳಂ ಚಿತ್ರ : ಸೌದಿ ವೇಲಕ್ಕ ಸಿಸಿ.225/2009
ಅತ್ಯುತ್ತಮ ಮರಾಠಿ ಚಿತ್ರ : ವಾಲ್ವಿ
ಅತ್ಯುತ್ತಮ ಕನ್ನಡ ಚಿತ್ರ : ಕೆಜಿಎಫ್ ಚಾಪ್ಟರ್ 2
ಅತ್ಯುತ್ತಮ ಹಿಂದಿ ಚಿತ್ರ : ಗುಲ್ಮೋಹರ್
ಅತ್ಯುತ್ತಮ ಆಕ್ಷನ್ ನಿರ್ದೇಶನ ಕೆಜಿಎಫ್ : ಚಾಪ್ಟರ್ 2
ಅತ್ಯುತ್ತಮ ನೃತ್ಯ ಸಂಯೋಜನೆ : ತಿರುಚಿತ್ರಬಲಂ
ಅತ್ಯುತ್ತಮ ಸಾಹಿತ್ಯ : ಫೌಜಾ
ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರೀತಮ್ (ಹಾಡುಗಳು), ಎ.ಆರ್.ರೆಹಮಾನ್ (ಹಿನ್ನೆಲೆ ಸಂಗೀತ)
ಅತ್ಯುತ್ತಮ ಮೇಕಪ್ : ಅಪರಾಜಿತೋ
ಅತ್ಯುತ್ತಮ ಕಾಸ್ಟ್ಯೂಮ್ : ಕಛ್ ಎಕ್ಸ್ಪ್ರೆಸ್
ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ ಅಪರಾಜಿಟೊ
ಅತ್ಯುತ್ತಮ ಸಂಭಾಷಣೆ : ಗುಲ್ಮೋಹರ್
ಅತ್ಯುತ್ತಮ ಛಾಯಾಗ್ರಹಣ : ಪೊನ್ನಿಯಿನ್ ಸೆಲ್ವನ್: ಭಾಗ 1
ಅತ್ಯುತ್ತಮ ಸಂಕಲನ : ಆಟಂ
ಅತ್ಯುತ್ತಮ ಸೌಂಡ್ ಡಿಸೈನ್ ಪೊನ್ನಿಯಿನ್ ಸೆಲ್ವನ್ : ಪಾರ್ಟ್ 1
ಅತ್ಯುತ್ತಮ ಚಿತ್ರಕಥೆ : ಆಟಂ
ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಸೌದಿ ವೇಲಕ್ಕ ಸಿಸಿ.225/2009
ಅತ್ಯುತ್ತಮ ಹಿನ್ನೆಲೆ ಗಾಯಕ : ಅರಿಜಿತ್ ಸಿಂಗ್ (ಬ್ರಹ್ಮಾಸ್ತ್ರ)