ಮುಲುಗು : ತೆಲಂಗಾಣದ ಮುಲುಗು ಜಿಲ್ಲೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಎನ್ಕೌಂಟರ್ ನಲ್ಲಿ 7 ನಕ್ಸಲರನ್ನು ಹತ್ಯೆಗೈದಿದ್ದಾರೆ.
ಪೊಲೀಸರು ಮತ್ತು ನಕ್ಸಲರ ಮಧ್ಯೆ ನಡೆದ ಗುಂಡಿ ಕಾಳಗದಲ್ಲಿ ಪೊಲೀಸರು ಏಳು ಮಾವೋವಾದಿಗಳನ್ನು ಕೊಂದು ಹಾಕಿದ್ದಾರೆ. ಈ ಕಾರ್ಯಾಚರಣೆ ತೆಲಂಗಾಣ ರಾಜ್ಯದ ಮುಲುಗು ಜಿಲ್ಲೆಯಲ್ಲಿ ನಡೆದಿದ್ದು, ಪೊಲೀಸರು ಏಳು ಮಂದಿ ನಕ್ಸಲರನ್ನು ಹತ್ಯೆಗೈದಿದ್ದಾರೆ. ಈ ಕುರಿತು ಜಿಲ್ಲಾ ಎಸ್ಪಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಮುಳುಗು ಜಿಲ್ಲೆಯಲ್ಲಿ ಭಾನುವಾರ (ಡಿಸೆಂಬರ್ 1) ಮುಂಜಾನೆ ಭಾರಿ ಎನ್‌ಕೌಂಟರ್ ನಡೆದಿದೆ. ಈ ಎನ್‌ಕೌಂಟರ್‌ನಲ್ಲಿ ಏಳು ಮಾವೋವಾದಿಗಳು ಹತರಾಗಿದ್ದರು. ಏತೂರುನಗರಂನ ಚಳಪಾಕ ಬಳಿ ಗ್ರೇಹೌಂಡ್ಸ್ ಮತ್ತು ಮಾವೋವಾದಿಗಳ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಗುಂಡಿನ ದಾಳಿಯಲ್ಲಿ ಮಾವೋವಾದಿಗಳು ಹತರಾಗಿದ್ದಾರೆ. ಸತ್ತವರಲ್ಲಿ ಮಾವೋವಾದಿ ಪ್ರಮುಖ ನಾಯಕರು ಇದ್ದಾರೆ ಎಂದು ತೋರುತ್ತದೆ. ಬದ್ರು ಅಲಿಯಾಸ್ ಪಾಪಣ್ಣ ಸೇರಿದಂತೆ ಮಹದೇವಪುರ ಕ್ಷೇತ್ರ ಸಮಿತಿ ಸದಸ್ಯ ಕೋಟಿ ಮತ್ತಿತರರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.