ಕಾರವಾರ : ಕಾರವಾರದಲ್ಲಿ ಮಧ್ಯರಾತ್ರಿ 60 ವರ್ಷದ ಹಳೆಯ ಸೇತುವೆಯೊಂದು ಕುಸಿದು ಬಿದ್ದಿರುವ ಘಟನೆ ಕೋಡಿಭಾಗ್ ನಲ್ಲಿ ನಡೆದಿದೆ.
ಕಾರವಾರದ ಕೋಡಿಭಾಗ್ ನಲ್ಲಿ ಕಾಳಿನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ 60 ವರ್ಷದ ಹಳೆಯ ಸೇತುವೆ ಕುಸಿದು ಬಿದ್ದಿದೆ. ಈ ಸೇತುವೆ ಹಲವು ದಿನಗಳಿಂದ ಬಿರುಕು ಬಿಟ್ಟಿತ್ತು. ಈ ನಡುವೆ ತಡರಾತ್ರಿ ಕುಸಿದು ಬಿದ್ಇದೆ. ಮಧ್ಯರಾತ್ರಿ ಸೇತುವೆ ಕುಸಿದು ಬಿದ್ದಿದ್ದು, ಜನರ ಸಂಚಾರ ಇಲ್ಲದ ಕಾರಣ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಸೇತುವೆ ಕುಸಿದ ಪರಿಣಾಮ ತಮಿಳುನಾಡಿನ ಲಾರಿ ಚಾಲಕ ಬಾಲ ಮುರುಗನ್ ಲಾರಿ ಸಮೇತ ನದಿಗೆ ಬಿದ್ದಿದ್ದ ಈ ವೇಳೆ ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ಲಾರಿ ಚಾಲಕನನ್ನು ಕಾಪಾಡಿದ್ದಾರೆ. ಬಳಿಕ ಲಾರಿ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.