ಪಣಜಿ: ಗೋವಾದ ಶಿರ್ಗಾವೊದ ಶ್ರೀ ಲೈರೈ ದೇವಿಯ ದೇವಾಲಯದ ಉತ್ಸವದಲ್ಲಿ ಕಾಲ್ತುಳಿತಕ್ಕೆ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಈ ಘಟನೆಯನ್ನು ಖಂಡಿಸಿರುವ ಕಾಂಗ್ರೆಸ್, “ಶಿರ್ಗಾವೊದ ಶ್ರೀ ಲೈರೈ ದೇವಿಯ ಜಾತ್ರೋತ್ಸವದಲ್ಲಿ ಕಾಲ್ತುಳಿತದಿಂದ ಗೋವಾ ಕಾಂಗ್ರೆಸ್ ತೀವ್ರ ದುಃಖಿತವಾಗಿದೆ. ನಾವು ಈ ದುರಂತ ಘಟನೆಯನ್ನು ಖಂಡಿಸುತ್ತೇವೆ ಮತ್ತು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಗಾಯಗೊಂಡವರೆಲ್ಲರೂ ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ” ಎಂದಿದ್ದಾರೆ.
ಗಾಯಾಳುಗಳನ್ನು ಗೋವಾ ವೈದ್ಯಕೀಯ ಕಾಲೇಜು ಮತ್ತು ಮಾಪುಸಾದ ಉತ್ತರ ಗೋವಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ