ಚಾಲಕನ ನಿಯಂತ್ರಣ ತಪ್ಪಿ ಕಾರುವೊಂದು ಮರಕ್ಕೆ ಡಿಕ್ಕಿಯಾಗಿ ಕಂದಕಕ್ಕೆ ಬಿದ್ದ ಪರಿಣಾಮ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಪಿಲಿಭಿತ್ ನಲ್ಲಿ ನಡೆದಿದೆ.
ನುರಿಯಾ ಪೊಲೀಸ್ ಠಾಣೆ ಬಳಿಯ ಪಿಲಿಭಿತ್-ತನಕ್‌ಪುರ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಕಂದಕಕ್ಕೆ ಪಲ್ಟಿಯಾಗಿದೆ. ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ.
अनियंत्रित कार पेड़ से जा टकराई,टकराने के बाद खाई में जा गिरी कार
कार में सवार थे 11 लोग,5 की मौत 6 लोग गंभीर रुप से घायल
घायलों का जिला अस्पताल में चल रहा है इलाज
सभी लोग उत्तराखंड के रहने वाले
थाना न्यूरिया के न्यूरिया कस्बे का मामला।#pilibhit@pilibhitpolice pic.twitter.com/yw0LQgAhBT
— News 24 Bharat || न्यूज़ 24 भारत (@News24Bharattv) December 6, 2024
ರಾತ್ರಿ 12 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಉತ್ತರಾಖಂಡದ ಖತಿಮಾ ನಿವಾಸಿಗಳು ಮದುವೆಗೆ ಪಿಲಿಭಿತ್‌ಗೆ ಬಂದಿದ್ದರು. ಈ ಜನರು ತಡರಾತ್ರಿ ಎರ್ಟಿಗಾ ಕಾರಿನಲ್ಲಿ ಹಿಂತಿರುಗುತ್ತಿದ್ದರು. ಕಾರಿನಲ್ಲಿ 11 ಮಂದಿ ಇದ್ದರು. ರಾತ್ರಿ 12 ಗಂಟೆಗೆ ಅವರ ಕಾರು ನ್ಯೂರಿಯಾ ಪೊಲೀಸ್ ಠಾಣೆ ಬಳಿ ತಲುಪಿತು. ಈ ವೇಳೆ ಕಾರು ಏಕಾಏಕಿ ನಿಯಂತ್ರಣ ತಪ್ಪಿದೆ. ಕಾರು ಮೊದಲು ಮರಕ್ಕೆ ಢಿಕ್ಕಿ ಹೊಡೆದು ನಂತರ ರಸ್ತೆಯಿಂದ ಆಚೆ ಹಳ್ಳಕ್ಕೆ ಪಲ್ಟಿಯಾಗಿದೆ.
ಅಪಘಾತದ ಬಗ್ಗೆ ಮಾಹಿತಿ ಲಭಿಸಿದ ಕೂಡಲೇ ಪೊಲೀಸರು ನ್ಯೂರಿಯಾ ಠಾಣೆಗೆ ಆಗಮಿಸಿದ್ದಾರೆ. ಕಾರಿಗೆ ತೀವ್ರ ಹಾನಿಯಾಗಿದೆ. ಕಾರನ್ನು ಕಟ್ ಮಾಡಿ ಎಲ್ಲರನ್ನೂ ಹೊರತೆಗೆಯಲಾಯಿತು. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಉತ್ತರಾಖಂಡದ ಖತಿಮಾ ನಿವಾಸಿಗಳಾದ ಕಾರು ಸವಾರರು ಮದುವೆ ಮೆರವಣಿಗೆಯಲ್ಲಿ ಇಲ್ಲಿಗೆ ಬಂದಿದ್ದರು ಎಂದು ಪಿಲಿಭಿತ್ ಎಸ್ಪಿ ಅವಿನಾಶ್ ಪಾಂಡೆ ತಿಳಿಸಿದ್ದಾರೆ. ಕಾರಿನಲ್ಲಿ 11 ಮಂದಿ ಇದ್ದರು. ಪಿಲಿಭಿತ್‌ನಿಂದ ಹೋಗುತ್ತಿದ್ದಾಗ ಅವರ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾಗಿದೆ. ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ.