ತಿರುಪತಿ : ತಿರುಪತಿಯಲ್ಲಿರುವ ವೈಕುಂಠ ದ್ವಾರ ದರ್ಶನ ಟಿಕೆಟ್ ಖರೀದಿಸುವ ಕೇಂದ್ರಗಳ ಬಳಿ ಕಾಲ್ತುಳಿತ ಸಂಭವಿಸಿ 6 ಜನರು ಸಾವನ್ನಪ್ಪಿದ್ದು, ಇದೀಗ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ತಿರುಪತಿ ಬೈರಾಗಿಪೆಟ್ಟದ ಪದ್ಮಾವತಿ ಬಳಿ ನಡೆದ ಕಾಲ್ತುಳಿತ ಘಟನೆ ಸಂಬಂಧ ಒಂದು ಪ್ರಕರಣ ದಾಖಲಾಗಿದ್ದರೆ, ವಿಷ್ಣು ನಿವಾಸದ ಸಂಭವಿಸಿದ ಕಾಲ್ತುಳಿತ ಪ್ರಕರಣ ಸಂಬಂದ 1 ಪ್ರಕರಣ ದಾಖಲಾಗಿದೆ.
ವೈಕುಂಠ ದ್ವಾರ ದರ್ಶನ ಟಿಕೆಟ್ ಖರೀದಿಸುವ ಕೇಂದ್ರಗಳ ಬಳಿ ಕಾಲ್ತುಳಿತ ಸಂಭವಿಸಿ 6 ಜನರು ಸಾವನ್ನಪ್ಪಿದ್ದು, 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡಲಾಗುವುದು ಮುಜರಾಯಿ ಸಚಿವ ನಾರಾಯಣ ರೆಡ್ಡಿ ಹೇಳಿದ್ದಾರೆ.
ಟಿಟಿಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಭಕ್ತರು, ಕಳೆದ 5 ವರ್ಷಗಳಿಂದ ಬರುತ್ತಿದ್ದೇನೆ ಆದರೆ ಇದು ಎಂದಿಗೂ ಸಂಭವಿಸಲಿಲ್ಲ, ಈ ವರ್ಷ ಮಾತ್ರ ಅದು ಸಂಭವಿಸಿತು.. ನಾನು ಸಾಯುತ್ತೇನೆ ಎಂದು ನಾನು ಭಾವಿಸಿದೆ ಆದರೆ ದೇವರ ದಯೆಯಿಂದ ನಾನು ಬದುಕುಳಿದೆ. ದ್ವಾರಗಳನ್ನು ತೆರೆದಿದ್ದರಿಂದ ಜಗಳ ನಡೆದಿದೆ ಎಂದು ಭಕ್ತರೊಬ್ಬರು ಹೇಳಿದ್ದಾರೆ. ದುರಂತ ನಡೆದ ಬಳಿಕ ಈಗ ಬಂದು ಬೆಳಗ್ಗೆಯಿಂದ ಕಾವಲು ಕಾಯುತ್ತಿದ್ದಾರೆ ಎಂದು ಮತ್ತೊಬ್ಬ ಭಕ್ತ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಭೀಕರ ಕಾಲ್ತುಳಿತದಲ್ಲಿ ಕೇರಳ ಮೂಲದ ಮಹಿಳೆ ನಿರ್ಮಲಾ (50) ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಉಳಿದಂತೆ ಆಂಧ್ರಪ್ರದೇಶದ ನರಸೀಪಟ್ಟಣದ ಬಿ.ನಾಯ್ಡು ಬಾಬು (51), ರಜಿನಿ (47), ಲಾವಣ್ಯ (40), ವಿಶಾಖಪಟ್ಟಣದ ಶಾಂತಿ (34) ಮತ್ತು ತಮಿಳುನಾಡಿನ ಸೇಲಂ ಪ್ರದೇಶದ ಮಲ್ಲಿಗಾ (49) ಶವವಾಗಿ ಪತ್ತೆಯಾಗಿದ್ದಾರೆ. . ಇನ್ನೂ 40 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರುಯು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ప్రభుత్వ వైఫల్యం, పోలీసుల నిర్లక్ష్యం వల్లే తొక్కిసలాట జరిగిందని భక్తుల ఆగ్రహం #TirupatiStampede #Tirupati #RTV pic.twitter.com/uns4CKpmYp
— RTV (@RTVnewsnetwork) January 9, 2025
గత 5 సంవత్సరాల నుండి వస్తున్నాను కానీ ఎప్పుడూ ఇలా జరగలేదు, ఈ సంవత్సరమే ఇలా జరిగింది.. చచ్చిపోతాను అనుకున్నాను కానీ దేవుడి దయవల్ల బతికాను.. @APPOLICE100 ఒక్కసారిగా గేట్లు తియ్యడం వల్లే తోపులాట జరిగిందని భక్తుడి ఆవేదన
టీటీడీ చైర్మన్ బీఆర్ నాయుడు, సీఎం @ncbn, హోం మంత్రి… pic.twitter.com/2ytyRt6AXw
— YSR Congress Party (@YSRCParty) January 8, 2025
.@APPOLICE100 తీరుపై తిరుపతిలో భక్తులు తీవ్రఆగ్రహం
ఇది ముమ్మాటికీ టీటీడీ, పోలీసు అధికారుల నిర్లక్ష్యమే.. వారి నిర్లక్ష్యం కారణంగానే తొక్కిసులాట జరిగి అంతమంది చనిపోయారు.. ఉదయం నుంచి పట్టించుకోకుండా ఇప్పుడు వచ్చి కాపలా కాస్తున్నారని భక్తులు ఆగ్రహం#SaveTirumalaFromTDP… pic.twitter.com/Mxp4GYzR6t
— YSR Congress Party (@YSRCParty) January 8, 2025
నా భార్య చనిపోయింది అని కనీసం ఫిర్యాదు కూడా చేయకుండా మార్చురీ కీ పంపించారు.
భూమి మీద పుట్టలేదు అని చూపిద్దామని అనుకున్నారు అనుకుంటున్నాను. pic.twitter.com/OIxyKTwqaw
— 𝐍𝐚𝐯𝐞𝐞𝐧 𝐘𝐒𝐉 𝐕𝐢𝐳𝐚𝐠 (@YSJ2024) January 9, 2025