ವೆನೆಜುವೆಲಾ : ವೆನೆಜುವೆಲಾ ಕರಾವಳಿಯಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿದ್ದು, ಭಯಭೀತರಾಗಿ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.
ಜೂನ್ 23, 2024 ರಂದು ಬೆಳಿಗ್ಗೆ 09:28 ಕ್ಕೆ ಭೂಕಂಪನ ಸಂಭವಿಸಿದೆ. ಟ್ರಿನಿಡಾಡ್ ಮತ್ತು ಟೊಬಾಗೊ, ಗಯಾನಾ ಮತ್ತು ಗ್ರೆನಡಾದಲ್ಲಿ ಭೂಕಂಪದ ಅನುಭವವಾಗಿದೆ. ಭೂಕಂಪದ ಕೇಂದ್ರ ಬಿಂದು ವೆನೆಜುವೆಲಾ ಕರಾವಳಿಯ ಬಳಿ ಇತ್ತು. ಇದರ ಆಳ 90 ಕಿಲೋಮೀಟರ್. ಭೂಕಂಪದ ತೀವ್ರತೆ 6.0ರಷ್ಟಿತ್ತು, ಇದನ್ನು ಮಧ್ಯಮ ತೀವ್ರತೆಯ ಭೂಕಂಪವೆಂದು ಪರಿಗಣಿಸಲಾಗಿದೆ. ಈ ಪ್ರಮಾಣದ ಭೂಕಂಪವು ಹಾನಿಯನ್ನು ಉಂಟುಮಾಡಬಹುದು ಆದರೆ ಅದು ತುಂಬಾ ವಿನಾಶಕಾರಿಯಲ್ಲ. ಈ ಘಟನೆಯಲ್ಲಿ ಯಾವುದೇ ರೀತಿಯ ಆಸ್ತಿ ಪಾಸ್ತಿ ಹಾನಿಯಾಗಿಲ್ಲ ಎಂದು ವರದಿಯಾಗಿದೆ.
EQ of M: 6.0, On: 23/06/2024 09:28:01 IST, Lat: 10.78 N, Long: 62.74 W, Depth: 90 Km, Location: Near Coast of Venezuela.
For more information Download the BhooKamp App https://t.co/5gCOtjdtw0 @DrJitendraSingh @Ravi_MoES @Dr_Mishra1966 @ndmaindia @Indiametdept pic.twitter.com/t1QXikfIS8— National Center for Seismology (@NCS_Earthquake) June 23, 2024