ಲೆಬನಾನ್ : ಹಿಜ್ಬುಲ್ಲಾ-ಇಸ್ರೇಲ್ ನಡುವಿನ ಯುದ್ಧ ಮುಂದುವರೆದಿದ್ದು. ಲೆಬನಾನ್ ಮೇಲೆ ಇಸ್ರೇಲ್ ಮತ್ತೆ ಕ್ಷಿಪಣಿ ದಾಳಿ ನಡೆಸಿದ್ದು, ದಾಳಿಯಲ್ಲಿ 50 ಕ್ಕೂ ಹೆಚ್ಚು ಹಿಜ್ಬುಲ್ಲಾ ಬಂಡೋಕರರು ಸಾವನ್ನಪ್ಪಿದ್ದಾರೆ.
ಬೈರುತ್ ಮತ್ತು ದಕ್ಷಿಣ ನಗರಗಳಲ್ಲಿ ಬಾಂಬ್ ದಾಳಿಗಳು ಮುಂದುವರೆದಿದ್ದು, ಇಸ್ರೇಲ್ ಸೇನೆಯು ಹಿಜ್ಬುಲ್ಲಾವನ್ನು ಗುರಿಯಾಗಿಸಿಕೊಂಡು ತನ್ನ ದಾಳಿಯನ್ನು ಮುಂದುವರಿಸಿದ್ದರಿಂದ ಇಸ್ರೇಲ್ ಸೇನೆಯು ತನ್ನ ವೈಮಾನಿಕ ದಾಳಿಯನ್ನು ಉತ್ತರ ಲೆಬನಾನ್ ಗೆ ವಿಸ್ತರಿಸಿದೆ.
ದಕ್ಷಿಣ ಲೆಬನಾನ್ ನ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿರುವ ಇಸ್ರೇಲ್ ಸೇನೆಯು ಈಗ ತನ್ನ ವೈಮಾನಿಕ ದಾಳಿಯನ್ನು ಉತ್ತರ ಲೆಬನಾನ್ ಗೆ ವಿಸ್ತರಿಸಿದೆ. ಇಸ್ರೇಲಿ ವಿಮಾನಗಳು ಉತ್ತರದ ಬೆಡ್ಡಾವಿ ಫೆಲೆಸ್ತೀನ್ ನಿರಾಶ್ರಿತರ ಶಿಬಿರದ ಬಳಿಯ ಕಟ್ಟಡವನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸದ್ದು, ದಾಳಿಯಲ್ಲಿ 50 ಕ್ಕೂ ಹೆಚ್ಚು ಹಿಜ್ಬುಲ್ಲಾ ಬಂಡುಕೋರರು ಸಾವನ್ನಪ್ಪಿದ್ದಾರೆ.