ಹೈದರಾಬಾದ್ : ತೆಲಂಗಾಣ ಹಾಗೂ ಆಂಧ್ರಪ್ರದೇಶದ ಹಲವಡೆ ಇಂದು ಬೆಳ್ಳಂಬೆಳಗ್ಗೆ ಭೂಕಂಪವಾಗಿದ್ದು, ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ತೆಲುಗು ರಾಜ್ಯಗಳಲ್ಲಿ ಭೂಕಂಪ ಅಸ್ತವ್ಯಸ್ತವಾಗಿದೆ. ಹೈದರಾಬಾದ್, ಹನುಮಕೊಂಡ, ಖಮ್ಮಂ, ಭದ್ರಾದ್ರಿ ಕೊತಗುಡೆಂ, ಮಣುಗೂರು, ಗೋದಾವರಿಖನಿ, ಭೂಪಾಲಪಲ್ಲಿ, ವರ್ಗ, ಚಿಂತಕಣಿ, ಭದ್ರಾಚಲಂ, ಸತ್ತುಪಲ್ಲಿ ಹಾಗೂ ಆಂಧ್ರಪ್ರದೇಶದ ವಿಜಯವಾಡ, ಜಗ್ಗಯ್ಯಪೇಟ್, ತಿರುಪ್ಪೂರ್ ಮತ್ತು ಗಂಪಲಗುಡೆಂ ಸಮೀಪದ ಗ್ರಾಮಗಳು ಕೆಲ ಸೆಕೆಂಡುಗಳ ಕಾಲ ಕಂಪಿಸಿದವು. ಇದರಿಂದ ಜನರು ಭಯಭೀತರಾಗಿ ಮನೆ, ಅಪಾರ್ಟ್‌ಮೆಂಟ್‌ಗಳಿಂದ ಹೊರಗೆ ಓಡಿ ಬಂದರು.