ನವದೆಹಲಿ: ಜಾರ್ಖಂಡ್ ನ ಬೊಕಾರೊ ಜಿಲ್ಲೆಯ ಲಾಲ್ಪಾನಿಯಾ ಪ್ರದೇಶದ ಲುಗು ಬೆಟ್ಟಗಳಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ ಸೋಮವಾರ ರಾಜ್ಯ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ವರು ನಕ್ಸಲರನ್ನು ಗುಂಡಿಕ್ಕಿ ಕೊಂದಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಒಂದು ಎಸ್ಎಲ್ಆರ್ ಮತ್ತು ಒಂದು ಐಎನ್ಎಸ್ಎಎಸ್ ರೈಫಲ್ ಅನ್ನು ಪಡೆಗಳು ವಶಪಡಿಸಿಕೊಂಡಿವೆ ಎಂದು ಸಿಆರ್ಪಿಎಫ್ ಉಲ್ಲೇಖಿಸಿ ಏಜೆನ್ಸಿ ತಿಳಿಸಿದೆ. ಸೈನಿಕರಿಗೆ ಇನ್ನೂ ಯಾವುದೇ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ, ಆದಾಗ್ಯೂ ಮಧ್ಯಂತರ ಗುಂಡಿನ ದಾಳಿ ಮುಂದುವರೆದಿದೆ ಎಂದು ಸಂಸ್ಥೆ ತಿಳಿಸಿದೆ.