ನವದೆಹಲಿ : ಇಂದು ಬೆಳ್ಳಂಬೆಳಗ್ಗೆ ಗುಜರಾತ್‌ನ ಕಛ್ ಜಿಲ್ಲೆಯಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಧಿಕೃತ ಮಾಹಿತಿ ತಿಳಿಸಿದೆ.
ಭಾರತೀಯ ಕಾಲಮಾನ ಬೆಳಿಗ್ಗೆ 4:30 ಕ್ಕೆ ಭೂಕಂಪ ಸಂಭವಿಸಿದ್ದು, ಇದರ ಕೇಂದ್ರಬಿಂದು 23.65°N ಅಕ್ಷಾಂಶ ಮತ್ತು 70.23°E ರೇಖಾಂಶದಲ್ಲಿ 10 ಕಿ.ಮೀ ಆಳದಲ್ಲಿದೆ. ಸಾವುನೋವುಗಳು ಅಥವಾ ಹಾನಿಯ ಬಗ್ಗೆ ತಕ್ಷಣದ ವರದಿಗಳಿಲ್ಲ.
X ನಲ್ಲಿನ ಪೋಸ್ಟ್ನಲ್ಲಿ, ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) “EQ of M: 4.4, On: 26/12/2025 04:30:02 IST, Lat: 23.65 N, Long: 70.23 E, ಆಳ: 10 Km, ಸ್ಥಳ: ಕಛ್, ಗುಜರಾತ್” ಎಂದು ಹಂಚಿಕೊಂಡಿದೆ.
An earthquake of magnitude 4.4 occurred in Kachchh, Gujarat, at 4.30 IST today: National Centre for Seismology pic.twitter.com/0Jb7nU5ogI
— ANI (@ANI) December 26, 2025








