ಬೀಜಿಂಗ್: ಚೀನಾದ ಉತ್ತರ ಹೆಬೈ ಪ್ರಾಂತ್ಯದ ಲ್ಯಾಂಗ್‌ಫಾಂಗ್‌ನಲ್ಲಿರುವ ಯೋಂಗ್‌ಕಿಂಗ್ ಕೌಂಟಿಯಲ್ಲಿ ಬುಧವಾರ ಬೆಳಗಿನ ಜಾವ (ಬೀಜಿಂಗ್ ಸಮಯ) ಭೂಕಂಪ ಸಂಭವಿಸಿದೆ.
ಇದು 4.2 ತೀವ್ರತೆಯ ಭೂಕಂಪವಾಗಿತ್ತು. ಚೀನಾದಲ್ಲಿ ಭೂಕಂಪಗಳನ್ನು ಮೇಲ್ವಿಚಾರಣೆ ಮಾಡುವ ಚೀನಾ ಭೂಕಂಪ ಜಾಲ ಕೇಂದ್ರ (CENC) ಇದನ್ನು ದೃಢಪಡಿಸಿದೆ.
CENC ವರದಿಯ ಪ್ರಕಾರ, ಈ ಭೂಕಂಪವು ಮೇಲ್ಮೈಯಿಂದ 20 ಕಿ.ಮೀ ಆಳದಲ್ಲಿ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ಚೀನಾದ ರಾಜಧಾನಿಯಿಂದ 55 ಕಿ.ಮೀ ದೂರದಲ್ಲಿದ್ದು, ಬೀಜಿಂಗ್‌ನಲ್ಲಿಯೂ ಕಂಪನದ ಅನುಭವವಾಗಿದೆ. ರಾಜಧಾನಿಯ ಅನೇಕ ಜನರು ತಮ್ಮ ಮೊಬೈಲ್‌ನಲ್ಲಿ ಈ ಎಚ್ಚರಿಕೆಯನ್ನು ಸ್ವೀಕರಿಸಿದ್ದಾರೆ.