ಬೆಳಗಾವಿ : ಯಜಮಾನಿಯರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರ್ಜರಿ ಸಿಹಿಸುದ್ದಿ ನೀಡಿದ್ದು, ಮುಂದಿನ 8-10 ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ 3 ತಿಂಗಳ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ 8-10 ದಿನಗಳಲ್ಲಿ ಗೃಹ ಲಕ್ಷ್ಮಿ ಯೋಜನೆ ಹಣ ಬಿಡುಗಡೆ ಮಾಡಲಾಗುವುದು. ನನಗೆ ಅಪಘಾತವಾಗಿ 40 ದಿನ ಆಸ್ಪತ್ರೆಯಲ್ಲಿ ಇದ್ದ ಕಾರಣ ಗೃಹ ಲಕ್ಷ್ಮಿ ಹಣ ಖಾತೆಗೆ ಹಾಕುವ ಪ್ರಕ್ರಿಯೆ ವಿಳಂಬವಾಗಿದೆ. ಇಷ್ಟು ದಿನ ವಿಳಂಬವಾಗಿದ್ದ ಹಣವನ್ನು 8-10 ದಿನದೊಳಗೆ ಮಹಿಳೆಯರ ಖಾತೆಗೆ ಜಮೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಗೃಹ ಲಕ್ಷ್ಮಿ ಹಣವನ್ನು ಹೊಸ ಪ್ಯಾಟರ್ನ್ ಮೂಲಕ ಹಾಕಲಾಗುತ್ತಿದೆ. ಬೆಂಗಳೂರು ಸುತ್ತಮುತ್ತಲ 5 ತಾಲೂಕು ಪಂಚಾಯಿತಿಗಳಿಗೆ ದುಡ್ಡು ಹಾಕಿದ್ದೇವೆ. ಅಲ್ಲಿಂದ ಸಿಡಿಪಿಒ ಮೂಲಕ ಹಣ ಬಿಡುಗಡೆ ಮಾಡಲಾಗಿದೆ. ಇನ್ನೂ ಸರಿಯಾಗಿ ಒಂದು ವಾರ, 10 ದಿನದೊಳಗೆ ಗೃಹ ಲಕ್ಷ್ಮಿ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಹಣಕಾಸು ಇಲಾಖೆ 2 ತಿಂಗಳ ಹಣ ಹಾಕು ಮಾಹಿತಿ ಇದೆ. ನಾನು ವಿಧಾನಮಂಡಲ ಬಜೆಟ್ ಅಧಿವೇಶನಕ್ಕೆ ಹೋಗುತ್ತಿದ್ದೇನೆ. ಅಲ್ಲಿ ಮೂರು ತಿಂಗಳ ಹಣ ಹಾಕುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.