ಬೆಂಗಳೂರು : ಅರಣ್ಯ ಇಲಾಖೆಯಲ್ಲಿ ಅತ್ಯುತ್ತಮ ಸಾಧನೆಗೈದ ಅಧಿಕಾರಿ/ಸಿಬ್ಬಂದಿಗಳಿಗೆ 2024ನೇ ಸಾಲಿನ ಮುಖ್ಯಮಂತ್ರಿ ಪದಕ ನೀಡುವ ಕುರಿತು ಸರ್ಕಾರ ಮಹತ್ವದಅದೇಶ ಹೊರಡಿಸಿದೆ.
ಮೇಲೆ ಓದಲಾದ ಕ್ರ. ಸಂ (1)ರ ಸರ್ಕಾರದ ಆದೇಶದಲ್ಲಿ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಅರಣ್ಯ ಸಂರಕ್ಷಣೆ, ಅಕ್ರಮ ಕಡಿತಲೆ, ವನ್ಯಜೀವಿ ಸಂರಕ್ಷಣೆ, ಅರಣ್ಯ ಪ್ರದೇಶವನ್ನು ಒತ್ತುವರಿದಾರರಿಂದ ತೆರವುಗೊಳಿಸುವುದು ಇತ್ಯಾದಿ ಕೆಲಸಕಾರ್ಯಗಳ ಮೂಲಕ ಗಣನೀಯ ಸಾಧನೆ ಮಾಡಿದ ರಾಜ್ಯ ಅರಣ್ಯ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳಿಗೆ ಮಾನ್ಯ ಮುಖ್ಯಮಂತ್ರಿಯವರ ಪದಕವನ್ನು ನೀಡುವ ಸಂಬಂಧ ರಚಿಸಲಾದ ನಿಯಮಗಳಿಗೆ ಸರ್ಕಾರದ ಅನುಮೋದನ ನೀಡಲಾಗಿದೆ.
ಮೇಲೆ ಓದಲಾದ ಕ್ರ.ಸಂ (2)ರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡ ಮುಖ್ಯಸ್ಥರು) ಪ್ರಸ್ತಾವನೆಯಲ್ಲಿ ಅರಣ್ಯ ಇಲಾಖೆಯಲ್ಲಿ ವೃತ್ತವಾರು ಸಮಿತಿ ಹಾಗೂ ರಾಜ್ಯ ಮಟ್ಟದ ಸಮಿತಿಗಳನ್ನು ರಚಿಸಲಾಗಿದ್ದು, ಸರ್ಕಾರಿ ಆದೇಶದಲ್ಲಿ ಸೂಚಿಸಿರುವಂತೆ ಅರಣ್ಯ ಸಂರಕ್ಷಣೆ, ಅಕ್ರಮ ಕಡಿತಲೆ ತಡೆಗಟ್ಟುವಿಕೆ, ವನ್ಯಜೀವಿ ಸಂರಕ್ಷಣೆ, ಅರಣ್ಯ ಪ್ರದೇಶವನ್ನು ಒತ್ತುವರಿದಾರರಿಂದ ತೆರವುಗೊಳಿಸುವುದು, ನೆಡುತೋಪು ಬೆಳಸುವಂತಹ ಸಾಧನೆ, ಅಭಿವೃದ್ಧಿ ಕಾರ್ಯಗಳು, ಮಾನವ ಪ್ರಾಣಿ ಸಂಘರ್ಷ ಹಾಗೂ ಇತರೆ ನವೀನ ಆಲೋಚನೆಗಳನ್ನು ಉಪಯೋಗಿಸಿರುವ ಇತ್ಯಾದಿ ಕೆಲಸ ಕಾರ್ಯಗಳ ಮೂಲಕ ಗಣನೀಯ ಸಾಧನೆ ಮಾಡಿದ ಅರಣ್ಯ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳಿಂದ ಸ್ವೀಕರಿಸಿದ ಅರ್ಜಿಗಳನ್ನು ವೃತ್ತವಾರು ಸಮಿತಿಗಳಿಂದ ಕ್ರೋಢೀಕರಿಸಿ, ವೃತ್ತಮಟ್ಟದಿಂದ ಸ್ವೀಕೃತವಾದ ಅರ್ಜಿಗಳನ್ನು ರಾಜ್ಯ ಮಟ್ಟದ ಸಮಿತಿಯ ಸಭೆಯಲ್ಲಿ ಕೂಲಂಕಷವಾಗಿ ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿ/ಸಿಬ್ಬಂದಿಗಳು ಮಾಡಿರುವ ಸಾಧನೆ ಅರ್ಹತೆಗಳನ್ನು ಸರ್ಕಾರದ ಅದೇಶದಲ್ಲಿ ತಿಳಿಸಿರುವ ಮಾನದಂಡಗಳಂತೆ ವೃಂದವಾರು ಹಾಗೂ ಕ್ಷೇತ್ರವಾರು ಅಂತಿಮಗೊಳಿಸಿ ವಲಯ ಅರಣ್ಯಾಧಿಕಾರಿ, ಉಪ ವಲಯ ಅರಣ್ಯಾಧಿಕಾರಿ, ಅರಣ್ಯ ರಕ್ಷಕ, ಅರಣ್ಯ ವೀಕ್ಷಕ, ಗಸ್ತು ಅರಣ್ಯ ಪಾಲಕ, ವಾಹನ ಚಾಲಕ, ನೆಡುತೋಪು ಕಾವಲುಗಾರ, ಆನೆ ಮಾವುತ, ಆನೆ ಜಮೇದಾರ, ಕ್ಷೇಮಾಭಿವೃದ್ಧಿ ನೌಕರರು/ಸಿಬ್ಬಂದಿಗಳನ್ನು ಮಾನ್ಯ ಮುಖ್ಯಮಂತ್ರಿಗಳ ಪದಕಕ್ಕೆ ಅರ್ಹರೆಂದು ಪರಿಗಣಿಸಿ ಪ್ರಸ್ತಾವನೆಯನ್ನು ಶಿಫಾರಸ್ಸು ಮಾಡಿ ಸಲ್ಲಿಸಿರುತ್ತಾರೆ. ಸರ್ಕಾರವು ಪ್ರಸ್ತಾವನೆಯನ್ನು ಸಮಗ್ರವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.