ಬೆಂಗಳೂರು : 2024-2025ನೇ ಶೈಕ್ಷಣಿಕ ಸಾಲಿನ ಬಿ.ಇಡಿ ಕೋರ್ಸಿಗೆ ದಾಖಲಾತಿ ಪ್ರಕ್ರಿಯೆಯ ಅವಧಿಯನ್ನು ವಿಸ್ತರಿಸಿ ಶಿಕ್ಷಣ ಇಲಾಖೆ ಆದೇಶಿಸಲಾಗಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ (1) ರ ದಿನಾಂಕ: 14/10/2024 ರ ಪತ್ರದಲ್ಲಿ 2024-2025ನೇ ಶೈಕ್ಷಣಿಕ ಸಾಲಿನ ಬಿ.ಇಡಿ ದಾಖಲಾತಿ ಪ್ರಕ್ರಿಯೆಯನ್ನು ದಿನಾಂಕ: 15.10.2024 ರಿಂದ 4ನೇ ಸುತ್ತಿನ ಕೊನೆಯ ದಿನಾಂಕ: 20/01/2025ರವರೆಗೆ ನೀಡಲಾಗಿತ್ತು. ಅನುಮತಿ
ಮುಂದುವದು, ಇದೇ ಸಮ ಸಂಖ್ಯೆಯ ಸರ್ಕಾರದ ಪತ್ರ ದಿನಾಂಕ:27/01/2025ರಲ್ಲಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಉಳಿಕೆಯಾಗಿರುವ ಸರ್ಕಾರಿ ಬಿ.ಎಡ್. ಸೀಟುಗಳನ್ನು ಭರ್ತಿ ಮಾಡಲು 5ನೇ ಸುತ್ತಿನ ಆನ್‌ಲೈನ್ ಕೌನ್ಸಿಲಿಂಗ್ ಗೆ ಹೆಚ್ಚುವರಿಯಾಗಿ 15 ದಿನಗಳ ಕಾಲಾವಕಾಶ ನೀಡಲಾಗಿತ್ತು.
ಪ್ರಸ್ತುತ ಉಲ್ಲೇಖ(2) ರ ಪತ್ರದಲ್ಲಿ ಕೋರಿರುವಂತೆ. ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಉಳಿಕೆಯಾಗಿರುವ ಒಟ್ಟು 2911 ಸರ್ಕಾರಿ ಬಿ.ಎಡ್. ಸೀಟುಗಳನ್ನು ಮತ್ತೊಮ್ಮೆ 6ನೇ ಸುತ್ತಿನ ಆನ್‌ಲೈನ್ ಕೌನ್ಸೆಲಿಂಗ್ ಗೆ ಹೆಚ್ಚುವರಿಯಾಗಿ 15 ದಿನಗಳ ಕಾಲಾವಕಾಶ ನೀಡಲಾಗಿದೆ.