ಹೈದರಾಬಾದ್ : ತೆಲಂಗಾಣದಲ್ಲಿ ಮತ್ತೊಂದು ಘೋರ ದುರಂತ ಸಂಭವಿಸಿದ್ದು, ಸರ್ಕಾರಿ ಬಸ್ ಮೇಲೆ ಟಿಪ್ಪರ್ ಮುಗುಚಿ 20 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಭೀಕರ ಅಪಘಾತದಲ್ಲಿ 1 ವರ್ಷದ ಹೆಣ್ಣು ಮಗು, 11 ಮಹಿಳೆಯರು ಹಾಗೂ 9 ಮಂದಿ ಪುರುಷರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸೋಮವಾರ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ತಾಂಡೂರು ಡಿಪೋಗೆ ಸೇರಿದ ಆರ್ ಟಿಸಿ ಬಸ್ ಗೆ ಜಲ್ಲಿಕಲ್ಲು ತುಂಬಿಕೊಂಡು ಬರುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಚೇವೆಲ್ಲಾ ಮಂಡಲದ ಮಿರ್ಜಾಗುಡಾ ಬಳಿ ಈ ಘಟನೆ ನಡೆದಿದೆ. ಬಸ್ ಮೇಲೆ ಜಲ್ಲಿಕಲ್ಲು ಲೋಡ್ ಬಿದ್ದಿದ್ದು, ಹಲವು ಪ್ರಯಾಣಿಕರು ಅದರಲ್ಲಿ ಸಿಲುಕಿಕೊಂಡರು. ಈ ಅಪಘಾತದಲ್ಲಿ ಟಿಪ್ಪರ್ ಚಾಲಕ ಸೇರಿ 20 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರಲ್ಲಿ 15 ತಿಂಗಳ ಮಗುವೂ ಸೇರಿದೆ. ಈ ಘಟನೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅನೇಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ವೇಳೆ ಬಸ್ನಲ್ಲಿ 70 ಮಂದಿ ಪ್ರಯಾಣಿಸುತ್ತಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಜೆಸಿಬಿ ಸಹಾಯದಿಂದ ರಕ್ಷಣಾ ಕಾರ್ಯ ಆರಂಭಿಸಿದ್ದಾರೆ.
ಈ ಅಪಘಾತದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಮತ್ತು ನೌಕರರು ಎಂದು ಪೊಲೀಸರು ಹೇಳುತ್ತಾರೆ. ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ಪ್ರತಿದಿನ ಬೆಳಿಗ್ಗೆ ಹೈದರಾಬಾದ್ಗೆ ಹೋಗುತ್ತಾರೆ. ಭಾನುವಾರ ರಜೆ ಇದ್ದ ಕಾರಣ ಕೆಲವರು ತಮ್ಮ ಮನೆಗಳಿಗೆ ತೆರಳಿ ವಾಪಸ್ ಪ್ರಯಾಣ ಬೆಳೆಸಿದರು. ಈ ಅವಘಡದಿಂದಾಗಿ ಹೈದರಾಬಾದ್-ಬಿಜಾಪುರ ರಸ್ತೆಯಲ್ಲಿ ಭಾರಿ ಸಂಚಾರ ಅಸ್ತವ್ಯಸ್ತವಾಗಿತ್ತು. ತಾಂಡೂರಿನಿಂದ ಹೈದರಾಬಾದ್ಗೆ ಹೋಗುತ್ತಿದ್ದಾಗ ಈ ಬಸ್ ನಡೆದಿದೆ.








