ನವದೆಹಲಿ : ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿ 18 ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ 30 ಕ್ಕೂ ಹೆಚ್ಚು ಜನರು ಗಾಯಗೊಂಡರು. ಮಹಾ ಕುಂಭಮೇಳಕ್ಕೆ ಹೋಗುವ ಪ್ರಯಾಣಿಕರ ದಟ್ಟಣೆಯಿಂದಾಗಿ ಕಾಲ್ತುಳಿತ ಉಂಟಾಯಿತು.
12, 13 ಮತ್ತು 14ನೇ ಪ್ಲಾಟ್‌ಫಾರ್ಮ್‌ಗಳು ಜನದಟ್ಟಣೆಯಿಂದ ತುಂಬುತ್ತಿದ್ದ ಸಮಯದಲ್ಲಿ ಈ ಕಾಲ್ತುಳಿತ ಸಂಭವಿಸಿದೆ. ಮಹಾಕುಂಭಕ್ಕೆ ಹೋಗುವ ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್ ಬರುವ ಸಮಯದಲ್ಲೇ ಇತರ ರೈಲುಗಳಿಗಾಗಿ ಕಾಯುತ್ತಿದ್ದ ಪ್ರಯಾಣಿಕರಿದ್ದರು. ಇದರಿಂದಾಗಿ ಫ್ಲಾಟ್ ಫಾರ್ಮ್ ನ ತುಂಬಾ ಜನದಟ್ಟಣೆಯಿಂದ ಕೂಡಿದವು ಈ ವೇಳೆ ಕಾಲ್ತುಳಿತ ಸಂಭವಿಸಿದೆ.
नई दिल्ली रेलवे स्टेशन पर "जो गिरा वो दबता चला गया जो इंजन के सामने गिरा वो कटता चला गया।"
आज तक पर लोग "200 मौतें" बता रहे हैं हालंकि रेलवे ने कहा है कि सिर्फ 15 लोगों की मौत हुई बाकी बेहोश है सच्चाई का इंतजार है।#NewDelhiRailwaystation#delhistampede pic.twitter.com/U663KVSaNB
— Anjali (@anju1608) February 16, 2025
ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದ ರೈಲಿನ ಬಳಿ ಕಾಲ್ತುಳಿತ ಸಂಭವಿಸಿದೆ. ಮಹಾ ಕುಂಭಮೇಳಕ್ಕೆ ರೈಲ್ವೆ ಇಲಾಖೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಮುಂದಿನ ಹತ್ತು ದಿನಗಳಲ್ಲಿ ಮಹಾ ಕುಂಭಮೇಳ ಕೊನೆಗೊಳ್ಳಲಿದೆ. ಆದರೆ… ನಿನ್ನೆ ವಾರಾಂತ್ಯವಾಗಿದ್ದರಿಂದ, ಮಹಾ ಕುಂಭಮೇಳವು ಇನ್ನಷ್ಟು ಜನದಟ್ಟಣೆಯಿಂದ ಕೂಡಿತ್ತು. 12, 13 ಮತ್ತು 14ನೇ ಪ್ಲಾಟ್‌ಫಾರ್ಮ್‌ಗಳು ಜನದಟ್ಟಣೆಯಿಂದ ತುಂಬುತ್ತಿದ್ದ ಸಮಯದಲ್ಲಿ ಈ ಕಾಲ್ತುಳಿತ ಸಂಭವಿಸಿದೆ. ಘಟನೆಯ ಬಗ್ಗೆ ರೈಲ್ವೆ ಇಲಾಖೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಪ್ರಧಾನಿ ನರೇಂದ್ರ ಮೋದಿ, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಮತ್ತು ರೈಲ್ವೆ ಸಚಿವರು ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.