ಮುಂಬೈ : ಬುಧವಾರ ಮಹಾರಾಷ್ಟ್ರದ ಮುಂಬೈನಲ್ಲಿ ಭಾರತೀಯ ನೌಕಾಪಡೆಯ ಸ್ಪೀಡ್ ಬೋಟ್ ನಿಯಂತ್ರಣ ತಪ್ಪಿ ದೋಣಿಗೆ ಡಿಕ್ಕಿ ಹೊಡೆದಿದೆ. ದೋಣಿಯಲ್ಲಿದ್ದ 13 ಮಂದಿ ಸಾವನ್ನಪ್ಪಿದ್ದು, 101 ಮಂದಿಯನ್ನು ರಕ್ಷಿಸಲಾಗಿದೆ.
ಮೃತ 13 ಮಂದಿಯಲ್ಲಿ 10 ಮಂದಿ ನಾಗರಿಕರು ಮತ್ತು 3 ಮಂದಿ ನೌಕಾಪಡೆ ಸಿಬ್ಬಂದಿಯಾಗಿದ್ದಾರೆ. ‘ನೀಲಕಮಲ್’ ಹೆಸರಿನ ದೋಣಿಯಲ್ಲಿ ಈ ಅವಘಡ ಸಂಭವಿಸಿದೆ. ದೋಣಿಯಲ್ಲಿ 109 ಪ್ರಯಾಣಿಕರು ಮತ್ತು ಐವರ ಸಿಬ್ಬಂದಿ ಇದ್ದರು. ಮುಂಬೈ ಕರಾವಳಿಯ ಬಳಿ ಸಂಭವಿಸಿದ ಅಪಘಾತದ ಭಯಾನಕ ವಿಡಿಯೋ ಹೊರಬಿದ್ದಿದೆ. ಈ ಸಂಬಂಧ ತಡರಾತ್ರಿ ಎಫ್‌ಐಆರ್ ದಾಖಲಾಗಿದೆ.
ವೀಕ್ಷಿಸಿ: ಮುಂಬೈ ದೋಣಿ ಅಪಘಾತದ ವಿಡಿಯೋ
Shocking Video: लाइव वीडियो: मुंबई में इंडिया गेट के पास की घटना
एक स्पीडबोट ने तेज गति से दूसरी नाव को टक्कर मार दी
नाव पर 60 यात्री सवार थे।#MUMBAI #BOAT pic.twitter.com/juabBdwgWa
— Jaimin Vanol (@VanolJaimin99) December 18, 2024
ಅಪಘಾತ ಸಂಭವಿಸಿದ ಅದೇ ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಈ ವೀಡಿಯೊವನ್ನು ಮಾಡಿದ್ದಾರೆ. ವೀಡಿಯೊದಲ್ಲಿ, ಸ್ಪೀಡ್ ಬೋಟ್ ದೂರದಲ್ಲಿ ಸುತ್ತುತ್ತಿರುವುದನ್ನು ಕಾಣಬಹುದು. ಇದ್ದಕ್ಕಿದ್ದಂತೆ ಆ ಸ್ಪೀಡ್ ಬೋಟ್ ಈ ದೋಣಿಯ ಕಡೆಗೆ ತಿರುಗಿ ನೇರವಾಗಿ ದೋಣಿಯ ಕಡೆಗೆ ಅತಿ ವೇಗದಲ್ಲಿ ಚಲಿಸುತ್ತದೆ ಮತ್ತು ಅಂತಿಮವಾಗಿ ಅದಕ್ಕೆ ಡಿಕ್ಕಿ ಹೊಡೆಯುತ್ತದೆ.