ಶ್ರೀನಗರ : 10 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಇಂದು ಶ್ರೀನಗರದಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಿದ್ದಾರೆ.
ಮನಸ್ಸು ಮತ್ತು ದೇಹದ ನಡುವೆ ಏಕತೆಯನ್ನು ಸ್ಥಾಪಿಸುವ ಪ್ರಾಚೀನ ಭಾರತೀಯ ಶಿಸ್ತಾಗಿರುವ ಯೋಗವು ಅಧಿಕೃತವಾಗಿ ವಿಶ್ವ ರಂಗವನ್ನು ಪ್ರವೇಶಿಸಿ ಹತ್ತನೇ ವರ್ಷವಾಗಿದೆ. ಇಂದು ವಿಶ್ವದಾದ್ಯಂತ 10ನೇ ವಿಶ್ವ ಯೋಗ ದಿನವನ್ನು ಆಚರಿಸಲಾಗುತ್ತಿದೆ.
ಶ್ರೀನಗರದ ದಾಲ್ ಸರೋವರದ ದಡದಲ್ಲಿರುವ ಶೇರ್-ಎ-ಕಾಶ್ಮೀರ್ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್ (ಎಸ್ಕೆಐಸಿಸಿ) ನಲ್ಲಿ ಬೆಳಿಗ್ಗೆ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗ ಮಾಡಲಿದ್ದಾರೆ.