ಬೆಂಗಳೂರು : ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕಿನ ಪ್ರಕರಣಗಳು ಹೆಚ್ಚಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಕೇರಳದಲ್ಲಿ ಅಮೀಬಾ ಸೋಂಕಿಗೆ ನಾಲ್ವರು ಮಕ್ಕಳು ಬಲಿಯಾಗಿದ್ದು, ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಮಹತ್ವದ ಸೂಚನೆ ನೀಡಿದೆ. ಜೊತೆಗೆ ಅಮಿಬಾ ಸೋಂಕಿನ ಲಕ್ಷಣಗಳು ಕಂಡುಬಂದ್ರೆ ಮಾಹಿತಿ ನೀಡುವಂತೆ ತಿಳಿಸಿದೆ.
ಸೋಂಕು ಹೇಗೆ ಉಂಟಾಗುತ್ತದೆ?
ಪಿಎಎಂಗೆ ಕಾರಣವಾಗುವ ಅಮೀಬಾದ ಪ್ರಕಾರವನ್ನು ನಾಗ್ಲೇರಿಯಾ ಫೌಲೆರಿ ಎಂದು ಕರೆಯಲಾಗುತ್ತದೆ, ಇದನ್ನು ಜನಪ್ರಿಯವಾಗಿ ‘ಮೆದುಳು ತಿನ್ನುವ ಅಮೀಬಾ’ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಕಲುಷಿತ ಜಲಮೂಲಗಳಲ್ಲಿ ಕಂಡುಬರುತ್ತದೆ. ರೋಗವನ್ನು ಉಂಟುಮಾಡುವ ಅಮೀಬಾದ ವಿಧವು ಮೆದುಳಿಗೆ ದಾರಿ ಕಂಡುಕೊಂಡರೆ ಮಾನವರಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳು ಉದ್ಭವಿಸಬಹುದು. ಸೋಂಕಿನ ಲಕ್ಷಣಗಳಲ್ಲಿ ತಲೆನೋವು, ಜ್ವರ ಮತ್ತು ವಾಕರಿಕೆ ಸೇರಿವೆ. ಪಿಎಎಂ ಸಾಂಕ್ರಾಮಿಕ ರೋಗವಲ್ಲ, ಅಂದರೆ ಇದು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುವುದಿಲ್ಲ.








