ಕೊಪ್ಪಳ: ಜಿಲ್ಲೆಯಲ್ಲಿ ಶಾಕಿಂಗ್ ಘಟನೆ ಎನ್ನುವಂತೆ ವಿದ್ಯುತ್ ತಂತಿಯೊಂದು ಬಾಲಕನ ಮೇಲೆ ಕಟ್ ಆಗಿ ಬಿದ್ದ ಪರಿಣಾಮ, ವಿದ್ಯುತ್ ಶಾಕ್ ನಿಂದ ಸ್ಥಳದಲ್ಲೇ ಸಾವನ್ನಪ್ಪಿರುವಂತ ಘಟನೆ ನಡೆದಿದೆ.
ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಬಹಿರ್ದೆಸೆಗೆ ತೆರಳಿದ್ದಂತ ಬಾಲಕನ ಮೇಲೆ ವಿದ್ಯುತ್ ತಂತಿಯೊಂದು ತುಂಡಾಗಿ ಬಿದ್ದಿದೆ. ಇದರ ಪರಿಣಾಮವಾಗಿ ಬಾಲಕ ವಿನಯ್(11) ಸ್ಥಳದಲ್ಲೇ ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಪೊಲೀಸರು ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಈ ಅವಘಡಕ್ಕೆ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬುದಾಗಿ ಪೋಷಕರು, ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
BREAKING: ತೆಲಂಗಾಣ ಡಿಎಸ್ಪಿಯಾಗಿ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಅಧಿಕಾರ ಸ್ವೀಕಾರ | Cricketer Mohammed Siraj
BREAKING : ಭಾರತದ ಮೊಟ್ಟ ಮೊದಲ ‘ಭಯೋತ್ಪಾದಕ’ ನಾಥೂರಾಮ್ ಗೋಡ್ಸೆ : MLC ಬಿಕೆ ಹರಿಪ್ರಸಾದ್ ಹೇಳಿಕೆ