ಹುಬ್ಬಳ್ಳಿ: ಶಾಲಾ ವಿದ್ಯಾರ್ಥಿ ಓರ್ವ ಯುವತಿಯೊಂದಿಗೆ ಮಾತನಾಡಿದ್ದ ಎನ್ನುವ ಕಾರಣಕ್ಕೆ ಆತನ ಮೇಲೆ ಹಲ್ಲೆ ನಡೆಸಿರುವ ಘಟನೆ ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯಲ್ಲಿ ಶಾಲಾ ವಿದ್ಯಾರ್ಥಿ ಓರ್ವ ಯುವತಿಯೊಂದಿಗೆ ಮಾತನಾಡುತ್ತಿದ್ದ ಎನ್ನಲಾಗಿದ್ದು, ಈ ನಡುವೆ ಕೆಲ ಹುಡುಗರು ಯುವತಿಯೊಂದಿಗೆ ಏಕೆ ಮಾತನಾಡಿದ್ದಿ ಅಂಥ ಹುಡುಗನನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು , ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ವಿದ್ಯಾರ್ಥಿಯ ಶಾಲೆಯ ಪ್ರಾಂಶುಪಾಲರು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಾಂಶುಪಾಲರು ನೀಡಿದ ದೂರಿನ ಅನ್ವಯ ಪೋಲೀಸರ ತನಿಖೆ ನಡೆಸಿ, ಹಲ್ಲೆ ಮಾಡಿದವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.