ಬೆಂಗಳೂರು: ಪುಸ್ತಕ ಪ್ರಿಯರಿಗೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ, ವೀರಲೋಕದಿಂದ ಫೆಬ್ರವರಿ.10, 11ರಂದು ಪುಸ್ತಕ ಸಂತೆಯನ್ನು ಆಯೋಜಿಸಲಾಗಿದೆ.
ಈ ಕುರಿತಂತೆ ವೀರಲೋಕ ಪ್ರಕಾಶನದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕನ್ನಡ ಪುಸ್ತಕ ಲೋಕಕ್ಕೆ ಕಸುವು ತುಂಬುವ ಪ್ರಯತ್ನದ ಸಲುವಾಗಿ, ಪುಸ್ತಕ ಸಂತೆಯನ್ನು ದಿನಾಂಕ 10-02-2024 ಮತ್ತು 11-02-2024ರಂದು ಆಯೋಜಿಸಲಾಗಿದೆ ಎಂದಿದೆ.
ಬೆಂಗಳೂರಿನ ಸ್ವಾಭಿಮಾನಿ ಉದ್ಯಾನವನ, ಹೆಚ್ ಎಸ್ ಆರ್ ಬಡವಾಣೆಯಲ್ಲಿ ಬೆಳಿಗ್ಗೆ 11 ಗಂಟೆಯಿಂದ ಎರಡು ದಿನ ಪುಸ್ತಕ ಸಂತೆ ನಡೆಯಲಿದೆ. ಸಂತೆಗೆ ಬನ್ನಿ, ಇಲ್ಲಿ ಪುಸ್ತಕದ ಜೊತೆಗೆ ಎಲ್ಲವೂ ಉಂಟು. ಹಾಡು, ಹರಟೆ, ಆಹಾರ, ಮಕ್ಕಳಿಗೆ ಆಟ ಎಲ್ಲವೂ ನಮ್ಮ ವೀರಲೋಕ ಪ್ರಕಾಶನದಿಂದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದೆ.
ಇನ್ನೂ ನೀವು ಮಳಿಗೆ ಇಡಲು ಇಚ್ಚಿಸಿದ್ರೇ 7022122121 ಅಥವಾ 8861212172ಗೆ ಕರೆ ಮಾಡಿ. ನಿಮ್ಮ ಸ್ಟಾಲ್ ಬುಕ್ ಮಾಡಿ ಅಂತ ತಿಳಿಸಿದೆ. ಅಲ್ಲದೇ ಹೆಚ್ಚಿನ ಮಾಹಿತಿಗಾಗಿ ಇದೇ ಸಂಖ್ಯೆಗೆ ಸಂಪರ್ಕಿಸಿ, ಪಡೆಯಬಹುದಾಗಿದೆ.
BREAKING:ದೆಹಲಿಯ ಗೋಕುಲ್ಪುರಿ ಮೆಟ್ರೋ ನಿಲ್ದಾಣದ ಒಂದು ಭಾಗ ಕುಸಿತ. ಕೆಲವರಿಗೆ ಗಾಯ
BREAKING NEWS: ‘ಮ್ಯಾನ್ಮಾರ್’ ಜೊತೆಗಿನ ‘ಮುಕ್ತ ಸಂಚಾರ ವ್ಯವಸ್ಥೆ’ಯನ್ನು ರದ್ದುಗೊಳಿಸಿದ ‘ಭಾರತ’