ಹಾವೇರಿ: ಪ್ರಧಾನಿ ನರೇಂದ್ರಮೋದಿಯವರ ವಿಕಸಿತ ಭಾರತದ ಕನಸು ಸಾಕಾರಗೊಳಿಸಲು ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರನ್ನು ಗೆಲ್ಲಿಸಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಕರೆ ನೀಡಿದ್ದಾರೆ.
ಅವರು ಇಂದು ಬ್ಯಾಡಗಿಯಲ್ಲಿ ಬಸವರಾಜ ಬೊಮ್ಮಾಯಿಯವರ ಪರವಾಗಿ ಬೃಹತ್ ರೋಡ್ ಶೋ ನಡೆಸಿ ಮಾತನಾಡಿದರು. ನಿಮ್ಮ ಉತ್ಸಾಹ ನೋಡಿದರೆ ಬೊಮ್ಮಾಯಿಯವರನ್ನು ಸಂಸತ್ ಸದಸ್ಯರನ್ನಾಗಿ ಮಾಡುವ ತೀರ್ಮಾನ ಮಾಡಿದ್ದೀರಿ. ಇದು ಬೊಮ್ಮಾಯಿಯವರ ಚುನಾವಣೆಯಲ್ಲ. ಮೋದಿಯವರು ವಿಕಸಿತ ಭಾರತ ಮಾಡಲು ಚುನಾವಣೆ ನಡೆಯುತ್ತಿದೆ. ಅವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ ಕಳುಹಿಸುವಂತೆ ಮನವಿ ಮಾಡಿದರು.
ಮೋದಿಯವರು ನಿಮಗೆ ಕಿಸಾನ್ ಸಮ್ಮಾನ್ ನಿಡಿದ್ದಾರಲ್ವಾ, ಉಜ್ವಲ ಗ್ಯಾಸ್ ನೀಡಿದ್ದಾರಲ್ವಾ, ನೀರು ನೀಡಿದ್ದಾರಲ್ವಾ, ಮೋದಿ ಭಾರತವನ್ನು ಆರ್ಥಿಕತೆಯಲ್ಲಿ ವಿಶ್ವದ ಐದನೇ ಸ್ಥಾನಕ್ಕೆ ತಂದು ನಿಲ್ಲಿಸಿದ್ದಾರೆ. ಅವರನ್ನು ಮೂರನೆ ಬಾರಿ ಪ್ರಧಾನಿ ಮಾಡಿದರೆ ಭಾರತವನ್ನು ವಿಶ್ವದ ಮೂರನೆ ಆರ್ಥಿಕ ಶಕ್ತಿಯಾಗಿ ಮಾಡುತ್ತಾರೆ ಎಂದರು.
ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ, ಇಂಡಿ ಒಕ್ಕೂಟ ಭ್ರಷ್ಟಾಚಾರಿಗಳ ಕೂಟವಾಗಿದೆ. ಕಾಂಗ್ರೆಸ್ ಯಾವಾಗಲೂ ಭ್ರಷ್ಟಾಚಾರಿಗಳನ್ನು ರಕ್ಷಣೆ ಮಾಡುತ್ತ ಬಂದಿದ್ದಾರೆ. ಅಗಸ್ಟಾ ವೆಂಸ್ಟ್ ಲ್ಯಾಂಡ್ ಹಗರಣ, ಅಕ್ಕಿ ಹಗರಣ, ಟುಜಿ ಹಗರಣ, ಮಮತಾ, ಅಕಿಲೇಶ್ ಯಾದವ್ ಡಿಎಂಕೆ ನಾಯಕರು ಎಲ್ಲರೂ ಭ್ರಷ್ಟಾಚಾರ ಮಾಡಿದ್ದಾರೆ. ಡಿ.ಕೆ. ಶಿವಕುಮಾರ್ ಕೂಡ ಭ್ರಷ್ಟಾಚಾರ ಮಾಡಿದ್ದಾರೆ ಎಂದರು.
ಬೇಲ್‌ಮೇಲೆ ನಾಯಕರು
ಇಂಡಿ ಒಕ್ಕೂಟದ ಬಹುತೇಕ ನಾಯಕರು ಬೇಲ್ ಮೇಲೆ ಇದ್ದಾರೆ. ಕಾಂಗ್ರೆಸ್ ನಾಯಕಿ ಸೊನಿಯಾ ಗಾಂಧಿ, ರಾಹುಲ್ ರಾಹುಲ್ ಗಾಂಧಿ, ಕಾರ್ತಿ ಚಿದಂಬರ್, ಲಾಲು ಪ್ರಸಾದ್, ಡಿಕೆ ಶಿವಕುಮಾರ್ ಎಲ್ಲರೂ ಬೇಲ್ ಮೇಲೆ ಇದ್ದಾರೆ. ಅರವಿಂದ ಕೇಜ್ರಿವಾಲ್ ಜೈಲಿನಲ್ಲಿದ್ದಾರೆ. ಇಂತಹ ನಾಯಕರು ನಮಗೆ ಬೇಕಾ ಎಂದು ಪ್ರಶ್ನಿಸಿದರು.
ಈ ಬಾರಿ ಕೇಂದ್ರದಲ್ಲಿ 400 ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಲು ಎಲ್ಲರೂ ಬಿಜೆಪಿಗೆ ಮತ ಹಾಕಿ ಬಸವರಾಜ ಬೊಮ್ಮಾಯಿಯವರನ್ನು ಸಂಸದರನ್ನಾಗಿ ಮಾಡಿ ದೆಹಲಿಗೆ ಕಳುಹಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಿಎಂ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷದ ನಾಯಕ ಆರ್. ಅಶೋಕ್, ಮಾಜಿ ಸಚಿವ ಬಿ.ಸಿ.ಪಾಟೀಲ್ ಪಾಲ್ಗೊಂಡಿದ್ದರು.
ಇದಕ್ಕೂ ಮೊದಲು ಜೆ.ಪಿ.ನಡ್ಡಾ ಅವರು, ಕಾಗಿನೆಲೆ ಗುರು ಪೀಠಕ್ಕೆ ಭೇಟಿ ನೀಡಿ, ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೋರ್ವಾದ ಪಡೆದುಕೊಂಡರು.
BREAKING: ಕರ್ನಾಟಕದಲ್ಲೂ ‘ಪತಂಜಲಿ ಉತ್ಪನ್ನ’ ನಿಷೇಧ.?: ಗುಣಮಟ್ಟ ಪರೀಕ್ಷೆಗೆ ‘ಸಚಿವ ದಿನೇಶ್ ಗುಂಡೂರಾವ್’ ಆದೇಶ