ಗದಗ : ಹಣಕ್ಕಾಗಿ ಸಿಎಂ ಆಗಿದ್ದಾಗ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ಟಿಕೆಟ್ ಮಾರಾಟ ಮಾಡಿದ್ದಾರೆ ಎಂದು ಮಾಜಿ ಶಾಸಕ ರಾಮಣ್ಣ ಲಮಾಣಿ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದ ವೇಳೆ ಶಿರಹಟ್ಟಿ ಎಂಎಲ್ ಎ ಬಿಜೆಪಿ ಟಿಕೆಟ್ ಹಣಕ್ಕೆ ಮಾರಾಟ ಮಾಡಿದ್ದಾರೆ ಎಂದು ಬೊಮ್ಮಾಯಿ ವಿರುದ್ಧ ರಾಮಣ್ಣ ಲಮಾಣಿ ಗಂಭೀರ ಆರೋಪ ಮಾಡಿದ್ದಾರೆ.
ಬಸವರಾಜ ಬೊಮ್ಮಾಯಿ ಅವರು ಹಣಕ್ಕಾಗಿ ಬಿಜೆಪಿ ಟಿಕೆಟ್ ಮಾರಾಟ ಮಾಡಿದ್ದರು. ನಮ್ಮ ಕ್ಷೇತ್ರದ ಅಲ್ಲದವ್ರಿಗೆ ಟಿಕೆಟ್ ಮಾರಾಟ ಮಾಡಿದ್ದಾರೆ. ಬಿಜೆಪಿಯಲ್ಲಿ ಶ್ರಮಪಟ್ಟು ಪಕ್ಷ ಕಟ್ಟಿದ್ದೆ. ಟಿಕೆಟ್ ತಪ್ಪಿದ ಬಳಿಕ ಕಾಂಗ್ರೆಸ್ ತತ್ವ ಸಿದ್ದಾಂತ ಒಪ್ಪಿ ಕಾಂಗ್ರೆಸ್ ಸೇರ್ಪಡೆ ಆಗಿದ್ದೇನೆ. ಬಸವರಾಜ್ ಬೊಮ್ಮಾಯಿ ಅವ್ರಿಂದ ಶಿರಹಟ್ಟಿ ತಾಲೂಕಿಗೆ ಅನ್ಯಾಯವಾಗಿದೆ. ದಮ್ಮು, ತಾಕತ್ತು ಇದ್ರೆ ಬಸವರಾಜ್ ಬೊಮ್ಮಾಯಿ ಗೆಲ್ಲಲಿ. ಬೊಮ್ಮಾಯಿ ಅವರನ್ನ ಸೋಲಿಸುತ್ತೇವೋ ಇಲ್ವೋ ಗೊತ್ತಿಲ್ಲ. ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಆರಿಸಿ ತರ್ತೀನಿ ಎಂದು ಹೇಳಿದ್ದಾರೆ.