ಬೆಂಗಳೂರು : ಉತ್ತರಾಖಂಡದಲ್ಲಿ ಚಾರಣಕ್ಕೆ ಹೋಗಿದ್ದ ಕರ್ನಾಟಕದ ಐವರು ಸೇರಿದಂತೆ ಒಂಭತ್ತು ಮಂದಿ ಸಾವನ್ನಪ್ಪಿದ್ದು, ಇಂದೇ ಅವರ ಮೃತದೇಹಗಳನ್ನು ಏರ್ ಲಿಫ್ಟ್ ಮಾಡಲಾಗುವುದು ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಇದೀಗ ನಾಲ್ವರು ಕನ್ನಡಿಗರ ಮೃತದೇಹ ಪತ್ತೆಯಾಗಿದೆ, ಬೆಳಗ್ಗೆ ಐವರ ಮೃತದೇಹಗಳನ್ನು ಉತ್ತರಕಾಶಿಗೆ ಸ್ಥಳಾಂತರಿಸಲಾಗಿತ್ತು. ಇಂದೇ ಎಲ್ಲಾ ಒಂಭತ್ತು ಮೃತದೇಹಗಳನ್ನು ಏರ್ ಲಿಫ್ಟ್ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಉತ್ತರಾಖಂಡದಲ್ಲಿ ಚಾರಣಕ್ಕೆ ಹೋಗಿದ್ದ ವೇಳೆ ಹವಮಾನ ವೈಪರೀತ್ಯದಿಂದಾಗಿ ಸಾವನ್ನಪ್ಪಿದ ಐವರು ಕನ್ನಡಿಗರ ಪೈಕಿ ನಾಲ್ವರ ಮೃತದೇಹಗಳು ಪತ್ತೆಯಾಗಿದ್ದು, ಉತ್ತರ ಕಾಶಿಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಯಲಿದೆ. ಬಳಿಕ ಬೆಂಗಳೂರಿಗೆ ಮೃತದೇಹಗಳನ್ನು ರವಾನಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
Update: On #Uttarakhand #Trekkers :
4 more bodies recovered
Following trekkers were rescued yesterday and shifted to Dehradun.
1. Soumya Canale
2. Smruthi Dolas
3. Sheena Lakshmi
4. S Shiva Jyoti
5. Anil Jamtige Arunachal Bhatt
6. Bharat Bommana Gouder
7. Madhu…— Krishna Byre Gowda (@krishnabgowda) June 6, 2024