ಬೆಂಗಳೂರು: ನಿನ್ನೆ ಹೊಸ ವರ್ಷಾಚರಣೆಯ ಸಂಭ್ರಮದ ವೇಳೆಯಲ್ಲಿ ಬಿಎಂಟಿಸಿಗೆ ಭರ್ಜರಿ ಆದಾಯವೇ ಹರಿದು ಬಂದಿದೆ. ನಿನ್ನೆ ಒಂದೇ ದಿನ 35 ಲಕ್ಷ ಜನರು ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದು, ಬರೋಬ್ಬರಿ 5 ಕೋಟಿ ಆದಾಯ ಬಂದಿದೆ.
ಬೆಂಗಳೂರಲ್ಲಿ ನಿನ್ನೆ ರಾತ್ರಿಯಂದು ಹೊಸ ವರ್ಷಾಚರಣೆಯನ್ನು ಜನರು ಸಂಭ್ರಮದಿಂದ ಆಚರಿಸಿದರು. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ವಿವಿಧೆಡೆಯಲ್ಲೇ ಜನ ಸಾಗರವೇ ಸೇರಿತ್ತು.
ನಗರದ ವಿವಿಧೆಡೆಗಳಿಂದ ಆಗಮಿಸಿದ್ದಂತ ಜನರು ಹೊಸ ವರ್ಷಾಚರಣೆಯನ್ನು ಆಚರಿಸಿ ಸಂಭ್ರಮಿಸಿದರು. ಇವರ ಅನುಕೂಲಕ್ಕಾಗಿ ಹೆಚ್ಚುವರಿ ಬಿಎಂಟಿಸಿ ಬಸ್ ಸಂಚಾರದ ವ್ಯವಸ್ಥೆ ಕೂಡ ಮಾಡಲಾಗಿತ್ತು.
ನಿನ್ನೆ ಒಂದೇ ದಿನ 35 ಲಕ್ಷ ಜನರು ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸಿದ್ದಾರೆ. ಹೀಗಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಬರೋಬ್ಬರಿ ರೂ.5,48,89,254 ಕೋಟಿ ಆದಾಯ ಬಂದಿರುವುದಾಗಿ ತಿಳಿದು ಬಂದಿದೆ.
ಕರ್ನಾಟಕದ ಹೆಮ್ಮೆಯ ‘KSRTC’ಗೆ ಬರೋಬ್ಬರಿ 9 ರಾಷ್ಟ್ರ ಮಟ್ಟದ ಪ್ರಶಸ್ತಿ
ಜ.5ರಂದು ಸಾಗರದಲ್ಲಿ ‘ಸಾಗರೋತ್ಸವ-2025’: ಭೂಮಣ್ಣಿ ಬುಟ್ಟಿ ಸ್ಪರ್ಧೆ, ಪವಾಡ ಬಯಲು ಕಾರ್ಯಕ್ರಮ ಆಯೋಜನೆ
BREAKING : ಯಾದಗಿರಿಯಲ್ಲಿ ಭೀಕರ ಮರ್ಡರ್ : ಅನೈತಿಕ ಸಂಬಂಧ ಹಿನ್ನೆಲೆ, ಕತ್ತು ಕುಯ್ದು ವ್ಯಕ್ತಿಯ ಬರ್ಬರ ಹತ್ಯೆ!