ಬೆಂಗಳೂರು: ಬಿಎಂಟಿಸಿಗೆ ಎಲ್ಸಿಟಾದಿಂದ ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಮಹತ್ತರ ಸೇವೆಗಾಗಿ ‘ಮೋಸ್ಟ್ ವ್ಯಾಲ್ಯೂಬಲ್ ಪಾರ್ಟ್ನರ್’ ಪ್ರಶಸ್ತಿ ಲಭಿಸಿದೆ. ಈ ಮೂಲಕ ಬಿಎಂಟಿಸಿಗೆ ಪ್ರಶಸ್ತಿಗಳ ಸರಮಾಲೆ ಮುಂದುವರೆದಿದೆ.
17 ಜುಲೈ 2025, ಗುರುವಾರ ದಂದು ಓಟೆರಾ ಹೋಟೆಲ್, ಎಲೆಕ್ಟ್ರಾನಿಕ್ಸ್ ಸಿಟಿ ವೆಸ್ಟ್ ನಲ್ಲಿ ನಡೆದ ಬೆಂಗಳೂರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್ಶಿಪ್ ಅಥಾರಿಟಿ (ELCITA) ವತಿಯಿಂದ ನೀಡಲಾಗುವ “ಮೋಸ್ಟ್ ವ್ಯಾಲ್ಯೂಬಲ್ ಪಾರ್ಟ್ನರ್ – 2024-25” ಗೌರವಕ್ಕೆ ಪಾತ್ರವಾಗಿದೆ. ಎಲ್ಸಿಟಾ ಸುಸ್ಥಿರತೆ ಪ್ರಶಸ್ತಿಗಳು 2024-25 ಕಾರ್ಯಕ್ರಮದ ಅಂಗವಾಗಿ, ಬೆಂ.ಮ.ಸಾ.ಸಂಸ್ಥೆಗೆ ವಿಶೇಷ ಪ್ರಶಂಸನಾ ಪತ್ರ ನೀಡಲಾಗುತ್ತಿದೆ.
ಇದು, ಎಲೆಕ್ಟ್ರಾನಿಕ್ಸ್ ಸಿಟಿಯ ಉದ್ಯೋಗಿಗಳಿಗೆ ಮತ್ತು ಭೇಟಿದಾರರಿಗೆ ವಿಶ್ವಾಸಾರ್ಹ ಸಾರ್ವಜನಿಕ ಸಾರಿಗೆ ಸೇವೆಗಳನ್ನು ನಿರಂತರವಾಗಿ ಒದಗಿಸುತ್ತಿರುವ ಸಂಸ್ಥೆಯ ಸೇವೆಯನ್ನು ಗುರುತಿಸುವ ಒಂದು ಮಹತ್ವದ ಪುರಸ್ಕಾರವಾಗಿದೆ. ಹಲವು ದಶಕಗಳಿಂದ ಸಂಸ್ಥೆಯು ಎಲೆಕ್ಟ್ರಾನಿಕ್ಸ್ ಸಿಟಿಯ ಸದಸ್ಯ ಸಂಸ್ಥೆಗಳಿಗೆ ನೀಡುತ್ತಿರುವ ಬೆಂಬಲಕ್ಕೂ ಇದು ಒಂದು ಮಾನ್ಯತೆ.
ಸಾರ್ವಜನಿಕರ ಸೇವೆಯ ಮೇಲಿನ ನಮ್ಮ ನಿಷ್ಠೆ ಮತ್ತು ಸಮರ್ಪಣೆಯ ಪ್ರತಿಫಲವಾಗಿ ಈ ರೀತಿಯ ಪ್ರಶಂಸೆಗಳು ನಮಗೆ ಇನ್ನಷ್ಟು ಪ್ರೇರಣೆ ನೀಡುತ್ತವೆ. ಎಲೆಕ್ಟ್ರಾನಿಕ್ಸ್ ಸಿಟಿಯ ಸಮೃದ್ಧಿ ಮತ್ತು ಸುಸ್ಥಿರತೆಗೆ ಸಹಕಾರ ನೀಡುವ ಕಾರ್ಯದಲ್ಲಿ ಮುಂದಿನ ದಿನಗಳಲ್ಲಿಯೂ ಸಹಭಾಗಿತ್ವ ಮುಂದುವರಿಸುತ್ತೇವೆ.
ಬಯೋಕಾನ್ ಲಿಮಿಟೆಡ್ ಮತ್ತು ಬೊಕಾಮ್ ಬೈಯಾಲಜಿಕ್ಸ್ ಲಿಮಿಟೆಡ್ನ ಸ್ಥಾಪಕರು ಹಾಗೂ ಅಧ್ಯಕ್ಷರಾಗಿರುವ ಕಿರಣ್ ಮಜೂಮ್ದಾರ್ ಷಾ ಮತ್ತು ಎಲ್ಸಿಟಾದ ಅಧ್ಯಕ್ಷರಾದ ಡಾ. ವಿ. ವೀರಪ್ಪನ್ ಅವರು ಈ ಪ್ರಶಸ್ತಿಯನ್ನು ಪ್ರದಾನಿಸಿದರು.
ಪೂರ್ವ ವಲಯದ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಸ್ವರ್ಣಲತಾ.ಎಂ ಅವರು ಸಂಸ್ಥೆಯ ಪರವಾಗಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ, ಪ್ರಶಸ್ತಿಯನ್ನು ಸ್ವೀಕರಿಸಿದರು.
ಬೆಂಮಸಾಸಂಸ್ಥೆಯು 6,000 ಕ್ಕೂ ಹೆಚ್ಚು ಬಸ್ಗಳನ್ನು ಹೊಂದಿದೆ, ಇದು ಲಕ್ಷಗಟ್ಟಲೆ ಪ್ರಯಾಣಿಕರಿಗೆ ಪರಿಣಾಮಕಾರಿ, ಕೈಗೆಟುಕುವ ಮತ್ತು ಪರಿಸರ ಸ್ನೇಹಿ ಸಾರಿಗೆ ಆಯ್ಕೆಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಗರದ ನಿವಾಸಿಗಳ ವಿಕಸಿತ ಅಗತ್ಯಗಳನ್ನು ಪೂರೈಸುವ ಸ್ಮಾರ್ಟ್ ಮತ್ತು ಸುಸ್ಥಿರ ಸಾರಿಗೆ ಪರಿಹಾರಗಳ ಅಭಿವೃದ್ಧಿಗೆ ನಿಗಮವು ಬದ್ಧವಾಗಿದೆ.
ಸರ್ಕಾರದ ಈ ಯೋಜನೆಯಡಿ ಸಿಗಲಿದೆ 3 ಲಕ್ಷ ರೂ. ಸಾಲ : ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ಮಾಹಿತಿ