ಬೆಂಗಳೂರು: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು, ಚಾಲಕನೊಬ್ಬ ಹೆದ್ದಾರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದಂತ ಘಟನೆ ಬೆಂಗಳೂರಲ್ಲಿ ನಡೆದಿದೆ.
ಬೆಂಗಳೂರಿನ ಹೊಸಕೋಟೆ ಟೋಲ್ ಪ್ಲಾಜಾ ಬಳಿಯಲ್ಲಿ ಈ ಘಟನೆ ನಡೆದಿದೆ. ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಚಾಲಕ ಆತ್ಮಹತ್ಯೆಗೆ ಯತ್ನಿಸಿದಂತ ವೇಳೆಯಲ್ಲಿ ಆತನನ್ನು ಸ್ಥಳೀಯರು, ಬಸ್ ನಲ್ಲಿದ್ದಂತ ಪ್ರಯಾಣಿಕರು ರಕ್ಷಿಸಿದ್ದಾರೆ.
ಆತ್ಮಹತ್ಯೆಗೆ ಬಿಎಂಟಿಸಿ ಚಾಲಕ ಯತ್ನಿಸಿದ್ದರಿಂದ ಕೆಲ ಕಾಲ ಪ್ರಯಾಣಿಕರು, ಸಾರ್ವಜನಿಕರು ವಿಚಲಿತರಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದಂತ ಪೊಲೀಸರು, ಚಾಲಕನನ್ನು ಮನವೊಲಿಸಿ, ಅಲ್ಲಿಂದ ಬಸ್ಸನ್ನು ಕಳುಹಿಸಿದ್ದಾರೆ.
ಈ ಇಡೀ ಘಟನೆ ಹೊಸಕೋಟೆ ಹೊರವಲಯದ ಟೋಲ್ ಪ್ಲಾಜಾ ಬಳಿಯಲ್ಲಿ ನಡೆದಿದ್ದು, ಕೆಲ ಕಾಲ ಸ್ಥಳದಲ್ಲಿ ಆತಂಕದ ವಾತಾವರಣಕ್ಕೂ ಕಾರಣವಾಗಿತ್ತು ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
BREAKING : ರಾಜ್ಯಸಭಾ ಅಭ್ಯರ್ಥಿಯಾಗಿ ‘ಸೋನಿಯಾ ಗಾಂಧಿ’ ಅವಿರೋಧ ಆಯ್ಕೆ
ಮಾರ್ಚ್.22ರಿಂದ ‘IPL ಪಂದ್ಯಾವಳಿ’ ಆರಂಭ – ಅಧ್ಯಕ್ಷ ಅರುಣ್ ಧುಮಾಲ್ | IPL Match 2024