ಬೆಂಗಳೂರು: ನಗರದಲ್ಲಿನ ಬಿಎಂಟಿಸಿ ಬಸ್ಸುಗಳಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದಂತ ಪ್ರಯಾಣಿಕರಿಗೆ ದಂಡದ ಬಿಸಿಯನ್ನು ಮುಟ್ಟಿಸಲಾಗಿದೆ. ಬಿಎಂಟಿಸಿಯಿಂದ ಬರೋಬ್ಬರಿ 1101 ಪ್ರಕರಣ ದಾಖಲಿಸಿ, ಬರೋಬ್ಬರಿ 7,65,090 ರೂ ದಂಡವನ್ನು ವಸೂಲಿ ಮಾಡಲಾಗಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಬಿಎಂಟಿಸಿಯು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ಟಿಕೇಟನ್ನು ಪಡೆಯದೆ ಅನಧಿಕೃತವಾಗಿ ಪ್ರಯಾಣ ಮಾಡುವವರನ್ನು ಮತ್ತು ಸಂಸ್ಥೆಯ ಸಾರಿಗೆ ಆದಾಯದ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ನಗರದಾದ್ಯಂತ ಸಂಚರಿಸುವ ವಾಹನಗಳನ್ನು ನಮ್ಮ ಸಂಸ್ಥೆಯ ತನಿಖಾ ತಂಡಗಳು ಮಾರ್ಚ್-2024 ರ ಮಾಹೆಯಲ್ಲಿ ಒಟ್ಟು 17,900 ಟ್ರಿಪ್ಗಳನ್ನು ತಪಾಸಿಸಿ 3840 ಟಿಕೇಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿ, ಅವರಿಂದ ಒಟ್ಟು ರೂ. 7,65,090/- ದಂಡ ವಸೂಲಿ ಮಾಡಿ ಸಂಸ್ಥೆಯ ನಿರ್ವಾಹಕರ ವಿರುದ್ಧ 1101 ಪ್ರಕರಣಗಳನ್ನು ದಾಖಲಿಸಿರುತ್ತಾರೆ ಎಂದಿದೆ.
ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 530 ಪುರುಷ ಪ್ರಯಾಣಿಕರಿಂದ ಒಟ್ಟು ರೂ. 53,000/- ಅನ್ನು ಮೋಟಾರು ವಾಹನ ಕಾಯ್ದೆ 1988ರ ಕಾಲಂ 177 ಮತ್ತು 94 ರ ಪ್ರಕಾರ ದಂಡ ವಿಧಿಸಲಾಗಿರುತ್ತದೆ ಎಂದು ತಿಳಿಸಿದೆ.
ಒಟ್ಟಾರೆಯಾಗಿ ಮಾರ್ಚ್-2024 ರ ಮಾಹೆಯಲ್ಲಿ 4,370 ಪ್ರಯಾಣಿಕರಿಂದ ಒಟ್ಟು ರೂ 8,18,090/- ದಂಡವನ್ನು ವಸೂಲಿ ಮಾಡಲಾಗಿದೆ ಎಂದಿದೆ.
ಪ್ರಯಾಣಿಕರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುವಾಗ ಅಧಿಕೃತ ಟಿಕೇಟ್ / ದಿನದ ಪಾಸು / ಮಾಸಿಕ ಪಾಸುಗಳನ್ನು ಹೊಂದಿ ಪ್ರಯಾಣಿಸುವುದು. ಇದರಿಂದ ಅನಗತ್ಯ ದಂಡ ಕಟ್ಟುವುದನ್ನು ತಡೆಯಬಹುದಾಗಿದೆ ಹಾಗೂ ಇಂತಹ ಪ್ರವೃತ್ತಿಯಿಂದ ಸಂಸ್ಥೆಯು ಉತ್ತಮ ಸೇವೆಯನ್ನು ಪ್ರಯಾಣಿಕರಿಗೆ ನೀಡಲು ಸಹಾಯವಾಗುತ್ತದೆ. ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಆಸನಗಳನ್ನು ತೆರವು ಮಾಡಿಕೊಡುವ ಮೂಲಕ ಅವರಿಗೆ ಕುಳಿತುಕೊಳ್ಳಲು ಅವಕಾಶ ನೀಡಬೇಕೆಂದು ಕೋರಲಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ: ಕೇಂದ್ರ ಕಛೇರಿ: ಕೇಂದ್ರ ತನಿಖಾದಳ ಮಾರ್ಚ್ -2024 ಮಾಹೆಯ ತನಿಖಾ ಕಾರ್ಯ ಸಾಧನೆ ವಿವರಣಾ ಪಟ್ಟಿ
ಕ್ರಮ ಸಂಖ್ಯೆ | ವಿವರ | ಮಾರ್ಚ್ -2024 |
1 | ತನಿಖೆ ಮಾಡಿದ ಒಟ್ಟು ಬಸ್ಗಳು | 17900 |
2 | ಪತ್ತೆಯಾದ ಪ್ರಕರಣಗಳು | |
ಅ)ಸಾಮಾನ್ಯ ಪ್ರಕರಣಗಳು | 973 | |
ಆ)ಕೆಂಪು ಚುಕ್ಕೆ ಪ್ರಕರಣಗಳು | 101 | |
ಇ)ಗಂಭೀರ ಕೆಂಪುಚುಕ್ಕೆ ಪ್ರಕರಣಗಳು | 23 | |
ಈ)ವಿಶೇಷ ಪ್ರಕರಣಗಳು | 03 | |
ಉ) ಖಾಸಗಿ ಬಸ್ ಗಳ ಪ್ರಕರಣಗಳು | 01 | |
ಒಟ್ಟು | 1101 | |
3 | ಟಿಕೇಟ್ ರಹಿತ ಪ್ರಯಾಣಿಕರಿಂದ ವಸೂಲಾದ ದಂಡದ ಹಣ (ರೂ) | 7,65,090.00 |
4 | ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ ಪುರುಷ ಪ್ರಯಾಣಿಕರಿಂದ ವಸೂಲಾದ ದಂಡದ ಹಣ (ರೂ) | 53,000.00 |
5 | ಒಟ್ಟು ವಸೂಲಾದ ದಂಡದ ಹಣ (ರೂ) | 8,18,090.00 |
6 | ದಂಡ ವಿಧಿಸಲಾದ ಟಿಕೇಟ್ ರಹಿತ ಪ್ರಯಾಣಿಕರ ಸಂಖ್ಯೆ | 3840 |
7 | ದಂಡ ವಿಧಿಸಲಾದ ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ ಪುರುಷ ಪ್ರಯಾಣಿಕರ ಸಂಖ್ಯೆ | 530 |
8 | ದಂಡ ವಿಧಿಸಲಾದ ಒಟ್ಟು ಪ್ರಯಾಣಿಕರ ಸಂಖ್ಯೆ | 470 |
ಶಿವಮೊಗ್ಗ: ಏ.21ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
Watch Video : ರಷ್ಯಾ ಸೂಪರ್ಸಾನಿಕ್ ಬಾಂಬರ್ ವಿಮಾನ ಪತನ, ಫ್ಲೈಟ್ ಫೈರ್ಬಾಲ್ ಆಗಿ ಮಾರ್ಪಟ್ಟ ವಿಡಿಯೋ ವೈರಲ್